‘ಭಾರತ್ ಜೋಡೊದ’ಲ್ಲಿ ಚಡ್ಡಿ ಸುಡುವ ದ್ವೇಷ- ಹೀಗಿದೆ ಬಿಜೆಪಿ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻಭಾರತ್‌ ಜೋಡೊ ಯಾತ್ರೆʼ ನಡೆಸುತ್ತಿರುವ ಕಾಂಗ್ರೆಸ್‌ ಪ್ರತಿದಿನ ಯಾವುದಾದರೊಂದು ವಿವಾದವನ್ನು ಸೃಷ್ಟಿ ಮಾಡುತ್ತಿದೆ. ಪ್ರಸ್ತುತ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್‌ನಲ್ಲಿ ಹ್ಯಾಂಡಲ್‌ನಲ್ಲಿ ಆರ್‌ಎಸ್‌ಎಸ್ ಚಡ್ಡಿ ಸುಡುತ್ತಿರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದೆ. ಇದಕ್ಕೆ ಶೀರ್ಷಿಕೆ ಕೂಡ ಕೊಟ್ಟಿದ್ದು  “ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ತಡೆಯಲು. ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತಿದ್ದೇವೆ ” ಎಂದು ಬರೆಯಲಾಗಿದೆ.

ಕಾಂಗ್ರೆಸ್‌ನ ಈ ಅತಿರೇಕದ ವರ್ತನೆಗೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದು, ಹೆಸರು ನೋಡಿದ್ರೆ ʻಭಾರತ್‌ ಜೋಡೊ ಯಾತ್ರೆʼ. ಆದರೆ ಅವರ ಕೆಲಸ ಹಿಂಸಾಚಾರವನ್ನು ಪ್ರಚೋದಿಸುವುದು, ರಾಷ್ಟ್ರೀಯವಾದಿಗಳನ್ನು ನೋಯಿಸುವುದು ಮತ್ತು ಬೆಂಕಿ ಹೊತ್ತಿಸುವುದು ಎಂದು ಕಾಂಗ್ರೆಸ್‌ ಪೋಸ್ಟ್‌ ವಿರುದ್ಧವಾಗಿ ಬಿಜೆಪಿ ಟೀಕೆ ಮಾಡಿದೆ.

ಕಾಂಗ್ರೆಸ್‌ನ ಕಿಡಿ ಹಚ್ಚುವ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಡಾ.ಎಂ. ವೈದ್ಯ, ʻಇದು ನಮ್ಮ ಮೇಲಿನ ಕಾಂಗ್ರೆಸ್‌ ದ್ವೇಷದ ಪ್ರತೀಕ. ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ಮೇಲಿನ ದ್ವೇಷಕ್ಕೆ ಇತಿಹಾಸವೇ ಇದೆ. ರಾಹುಲ್‌ ಗಾಂಧಿ ಅವರ ತಂದೆ ರಾಜೀವ್‌ ಗಾಂಧಿ, ಅವರ ಮುತ್ತಾತ ಜವಾಹರಲಾಲ್‌ ನೆಹರೂ ಕೂಡ ಆರ್‌ಎಸ್‌ಎಸ್‌ ಬೆಳವಣಿಗೆಯನ್ನು ತಡೆಯಲು ಪ್ರಯತ್ನಿಸಿದ್ದರು. ಇದೀಗ ರಾಹುಲ್‌ ಗಾಂಧಿ ಕೂಡ ಅದೇ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಡಾ.ಎಂ. ವೈದ್ಯ ಹೇಳಿದರು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡಾ ಕಾಂಗ್ರೆಸ್ ಟ್ವೀಟ್ ವಿರುದ್ಧ ಹರಿಹಾಯ್ದಿದ್ದು, ಇದು ಕಾಂಗ್ರೆಸ್‌ನ ನಾಚಿಕೆಗೇಡಿನ ಮನಸ್ಥಿತಿ ಪ್ರತಿಬಿಂಬಿಸುತ್ತಿದೆ. ಕಾಂಗ್ರೆಸ್ ಪಕ್ಷವು ತನ್ನ ನಿಜವಾದ ಉದ್ದೇಶವನ್ನು ಕೂಡ ಮರೆಮಾಚುತ್ತಿಲ್ಲ. ‘ಭಾರತ್ ಜೋಡೊ’ ವೇಷ ಹಾಕಿಕೊಂಡು ‘ಭಾರತ್ ತೋಡೊ’ಕಾರ್ಯದಲ್ಲಿ ಮಗ್ನರಾಗಿದ್ದಾರೆ. ರಾಷ್ಟ್ರೀಯವಾದಿಗಳನ್ನು ನೋಯಿಸುವ ಅವರ ಉದ್ದೇಶವನ್ನು ಭಾರತದ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Such a shameful tweet representing such a shameful mindset.
Congress Party is not even hiding its true intentions. In the garb of ‘Bharat Jodo’, it is indulging in ‘Bharat Todo’. India will not forgive them for their intentions of hurting nationalists! https://t.co/EgG3mE9L4X

— Himanta Biswa Sarma (@himantabiswa)

ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ಸ್ಪಂದಿಸಿದ್ದು, ʻಕಾಂಗ್ರೆಸ್ ಕೇವಲ 5 ದಿನಗಳಲ್ಲಿ ತನ್ನ ಕೋರೆಹಲ್ಲುಗಳನ್ನು ಹೊರಸೂಸಿದೆ. ನೆಲ್ಲಿಯಿಂದ ಭಾಗಲ್ಪುರದವರೆಗೆ, ಖೈರ್ಲಾಂಜಿಯಿಂದ ಗೋದ್ರಾವರೆಗೆ, ಹಾಶಿಂಪುರದಿಂದ ಸಿಖ್ ಹತ್ಯಾಕಾಂಡದವರೆಗೆ ಸಂಘಟಿತ ಹಿಂಸಾಚಾರದಲ್ಲಿ ಪ್ರವರ್ಧಮಾನಕ್ಕೆ ಬಂದ ಪಕ್ಷವು ಎಂದಿಗೂ ಜೋಡೋ ಭಾರತಕ್ಕೆ ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ಮಾಡಿದರು.  ಕಾಂಗ್ರೆಸ್ ದುಷ್ಟ ಕೆಲಸಗಳು ಇತಿಹಾಸದ ಕಸದ ಬುಟ್ಟಿಗೆ ಸೇರಲು ಮಾತ್ರ ಅರ್ಹವಾಗಿದೆ ಎಂದರು.

The Congress has bared its fangs in just 5 days! A party that has thrived on organised violence, from Nellie to Bhagalpur, from Khairlanji to Godhra, from Hashimpura to the Sikh genocide, can never Jodo Bharat. Congress is evil. It deserves to be confined to dustbin of history.

– Amit Malviya

ದೆಹಲಿಯ ಮಾಜಿ ಶಾಸಕ ಕಪಿಲ್ ಮಿಶ್ರಾ ಕಾಂಗ್ರೆಸ್‌ ಟ್ವೀಟ್‌ ಅನ್ನು ರಾಮಾಯಣದಲ್ಲಿ ಬರುವ ಪ್ರಸಂಗವೊಂದಕ್ಕೆ ಹೋಲಿಕೆ ಮಾಡಿದ್ದಾರೆ.  ʻಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವ ಮೊದಲು ರಾವಣ ಕೂಡಾ ಯೋಚಿಸಿದ್ದು ಹೀಗೆ. ಆದರೆ ಕೊನೆಗೆ ಆದದ್ದು ಮಾತ್ರ ಇಡೀ ಲಂಕೆ ಸುಟ್ಟು ಬೂದಿಯಾಯಿತು, ಆಗಲೂ ಹನುಮಂತನ ಬಾಲ ಮಾತ್ರ ಸುಡಲಿಲ್ಲ. ಪ್ರಸ್ತುತ ಕಾಂಗ್ರೆಸ್ಸಿನಲ್ಲಾಗುವುದು ಅದೇ ಎಂದು ವ್ಯಂಗ್ಯ ಮಾಡಿದರು.

रावण ने हनुमान जी की पूँछ में आग लगाने से पहले यहीं सोचा था

बाद में पूरी लंका जल कर राख हो गयी , पूँछ तब भी नहीं जली

बस यही हाल कांग्रेस का होगा https://t.co/gOG97Exajp

— Kapil Mishra (@KapilMishra_IND) September

12, 2022

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಟ್ವೀಟ್‌ ಮಾಡಿ, ‘ಕಾಂಗ್ರೆಸ್ ನೆಹರೂ ಕಾಲದಿಂದಲೂ ಭಾರತವನ್ನು ಸುಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

CONgress – Burning India from the time of Nehru ! ! ! #CONgressMuktBharat

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!