ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನ ಗೆದ್ದ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಅಂಧ ಯುವತಿ ರಕ್ಷಿತಾ ರಾಜುಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಈ ವೇಳೆ ರಕ್ಷಿತಾ ರಾಜು ಭಾರತದಲ್ಲೇ ಸಿಗದಂತಹಾ 5,500 ರೂ. ಮೌಲ್ಯದ ಅಪರೂಪದ ಉಡುಗೊರೆಯನ್ನು ಪ್ರಧಾನಿ ಮೋದಿಗೆ ನೀಡಿದ್ದಾರೆ. ಅಂಧ ಯುವತಿಯಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ ಖುಷಿ ಪಟ್ಟು ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ.
ದೆಹಲಿಯಲ್ಲಿ ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮೋದಿ ಅಭಿನಂದನೆ ವೇಳೆ ಪ್ರಧಾನಿ ಮೋದಿಗೆ ತನ್ನ ಓಟದ ಪಾರ್ಟನರ್ ಟಿಟ್ಟರ್ ಅನ್ನ ನೀಡಿದ್ದಾಳೆ.
ರಕ್ಷಿತಾ ರಾಜು ಅಂಧ ಯುವತಿ. ಕಣ್ಣು ಕಾಣೋದಿಲ್ಲ. ಮೋದಿ ಹೇಗಿದ್ದಾರೆಂದೂ ಗೊತ್ತಿಲ್ಲ. ಆದರೂ ಮೋದಿ ಅನ್ನೋ ಹೆಸರಿಗೆ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ.
ಟಿಟ್ಟರ್.ಅದು ಭಾರತದಲ್ಲಿ ಸಿಗುವುದಿಲ್ಲ. ಅದನ್ನು ರಕ್ಷಿತಾ ರಾಜು ಚೀನಾದಿಂದ ತಂದಿದ್ದರು. ಅದನ್ನು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಸಮಿತಿ ಸರ್ಟಿಫೈ ಮಾಡಿರುತ್ತದೆ. ಅದೇ ಟಿಟ್ಟರ್ ಧರಿಸಿ ರಕ್ಷಿತಾ ರಾಜು 2018ರಲ್ಲೂ ಚಿನ್ನದ ಪದಕ ಗೆದ್ದಿದರು. ಈಗಲೂ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಬೆಲೆ 5,500 ರೂ. ತಾನು ಓಡಿ 2 ಚಿನ್ನದ ಪದಕ ಗೆದ್ದ ಅಪರೂಪದ ಟಿಟ್ಟರ್ ಅನ್ನು ರಕ್ಷಿತಾ ರಾಜು ಪ್ರಧಾನಿ ಭೇಟಿ ವೇಳೆ ಮೋದಿಗೆ ನೀಡಿ ಖುಷಿಪಟ್ಟಿದ್ದಾರೆ. ಮೋದಿ ಕೂಡ ಸಂತಸಗೊಂಡಿದ್ದಾರೆ.
ಟಿಟ್ಟರ್ ಹೇಗೆ ಕೆಲಸ ಮಾಡುತ್ತೆ?
ಟಿಟ್ಟರ್ ಅಂದ್ರೆ ಅದೊಂದು ಮಾದರಿ ಹಗ್ಗದಂತೆ. ಅಂಧ ಓಟಗಾರರಿಗೂ ಹಾಗೂ ಅವರ ಜೊತೆ ಓಡುವವರಿಗೂ ಈ ಟಿಟ್ಟರ್ ಸಹಾಯ ಮಾಡುತ್ತೆ. ಅದು ಇಷ್ಟೆ ಉದ್ದ, ಇಷ್ಟೆ ಅಗಲ. ಇಷ್ಟೆ ದಪ್ಪ ಇರಬೇಕೆಂಬ ಹತ್ತಾರು ನಿಯಮಗಳಿವೆ. ಅದೇ ರೀತಿ ಈ ಟಿಟ್ಟರ್ ಇರಬೇಕು. ಅಂಧರ ಜೊತೆ ಓಡುವವರು ತಮ್ಮ ಕೈಗೆ ಹಾಕಿಕೊಂಡು ಅವರು ಓಡುವಂತೆಯೇ ಇವರು ಓಡಬೇಕು. ಅವರನ್ನು ಮುಟ್ಟುವಂತಿಲ್ಲ. ಎಳೆದುಕೊಂಡು ಓಡುವಂತಿಲ್ಲ. ಅಂಧರಿಗಿಂತ ಇವರೇ ಮೊದಲು ಓಡುವಂತಿಲ್ಲ. ಹೀಗೆ ಹತ್ತಾರು ನಿಯಮಗಳ ಮಧ್ಯೆ ಅಂಧ ಓಟಗಾರರು ಹಾಗೂ ಜೊತೆ ಓಟಗಾರರ ಮಧ್ಯೆ ಸಮಯೋಚಿತವಾಗಿ ಓಡಲು ಈ ಟಿಟ್ಟರ್ ಸಹಾಯ ಮಾಡುತ್ತೆ.