ಮುಂದಿನ 12 ಗಂಟೆಗಳಲ್ಲಿ ತೀವ್ರಗೊಳ್ಳಬಹುದು ‘ಸಿತ್ರಾಂಗ್’ ಚಂಡಮಾರುತ: ಈ ರಾಜ್ಯಗಳಲ್ಲಿ ಭಾರೀ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚಂಡಮಾರುತ ‘ಸಿತ್ರಾಂಗ್’ ಮುಂದಿನ 12 ಗಂಟೆಗಳಲ್ಲಿ ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದ್ದು ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಸಿತ್ರಾಂಗ್ ಚಂಡಮಾರುತವು ಮಂಗಳವಾರ ಬೆಳಿಗ್ಗೆ ಬಾಂಗ್ಲಾದೇಶದ ಟಿಂಕೋನಾ ದ್ವೀಪ ಮತ್ತು ಸ್ಯಾಂಡ್‌ವಿಪ್ ನಡುವೆ ವಾಯುಭಾರ ಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ.

ಸಿತ್ರಾಂಗ್‌ ನಿಂದ ಬಂಗಾಳಕೊಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ವಾಯುಭಾರ ಕುಸಿತವುಂಟಾಗಿದೆ ಎಂದು ಐಎಂಡಿ ಹೇಳಿದೆ. ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಕಡಿಮೆ ಒತ್ತಡವು ಅಭಿವೃದ್ಧಿಗೊಂಡಿದ್ದು, ಅಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ ಮತ್ತು ಕಳೆದ ಎರಡು ದಿನಗಳಲ್ಲಿ ವಾಯುವ್ಯಕ್ಕೆ ಚಲಿಸಿದೆ ಎನ್ನಲಾಗಿದೆ.

ಅಕ್ಟೋಬರ್ 23 ಮತ್ತು 26 ರ ನಡುವೆ ಭಾರೀ ಪ್ರಮಾಣದ ವಾಯುಭಾರ ಕುಸಿತವುಂಟಾಗುವ ನಿರೀಕ್ಷೆಯಿದ್ದು ಒಡಿಶಾ ಮತ್ತು ಬಂಗಾಳ ಕರಾವಳಿಯ ಮಧ್ಯ ಬಂಗಾಳ ಕೊಲ್ಲಿಯ ಆಳ ಸಮುದ್ರದ ಪ್ರದೇಶಕ್ಕೆ ಶನಿವಾರದ ನಂತರ ಮೀನುಗಾರರಿಗೆ ತೆರಳದಂತೆ ಸೂಚಿಸಲಾಗಿದೆ.

ಬಂಗಾಳ ಮತ್ತು ಒಡಿಶಾ ಎರಡೂ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಸೋಮವಾರ ಮತ್ತು ಮಂಗಳವಾರ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಕೆಲವು ಭಾಗಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!