ಭಾರತಕ್ಕೆ ಚೀತಾಗಳನ್ನು ತರಲು ಮೊದಲು ಪ್ರಯತ್ನ ಮಾಡಿದ್ದು ನಾವು,‌ ಕ್ರೆಡಿಟ್‌ ನಮಗೆ ಸಿಗಬೇಕು: ಕಾಂಗ್ರೆಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಫ್ರಿಕಾ ದೇಶ ನಮೀಬಿಯಾದಿಂದ ಇಂದು ಭಾರತಕ್ಕೆ 8 ಚೀತಾಗಳು ಬಂದಿಳಿದಿವೆ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದಲ್ಲಿ ಇಂಟರ್-ಕಾಂಟಿನೆಂಟಲ್ ಚೀತಾ ಟ್ರಾನ್ಸ್‌ಲೊಕೇಶನ್ ಯೋಜನೆಯನ್ನು ಉದ್ಘಾಟಿಸುವ ಮೊದಲು ಕಾಂಗ್ರೆಸ್ ವಾದವೊಂದನ್ನು ಮುಂದಿಟ್ಟಿದೆ. 2008-09ರಲ್ಲಿ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ‘ಪ್ರಾಜೆಕ್ಟ್ ಚೀತಾ’ದ ಪ್ರಸ್ತಾವನೆಯನ್ನು ಅನುಮೋದಿಸಿತ್ತು. ಆ ಮೂಲಕ ಚೀತಾಗಳನ್ನು ಭಾರತಕ್ಕೆ ತರಲು ಮೊದಲು ಪ್ರಯತ್ನ ಆರಂಭಿಸಿದ್ದು ನಾವು ಎಂದು ಹೇಳಿದೆ.

“2008-09ರಲ್ಲಿ ‘ಪ್ರಾಜೆಕ್ಟ್ ಚೀತಾ’ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿತ್ತು. ಮನಮೋಹನ್ ಸಿಂಗ್ ಅವರ ಸರ್ಕಾರ ಅದಕ್ಕೆ ಅನುಮೋದನೆ ನೀಡಿತು. ಆಗಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಅವರು ಏಪ್ರಿಲ್ 2010 ರಲ್ಲಿ ಈ ಸಂಬಂಧ ದಕ್ಷಿಣ ಆಫ್ರಿಕಾದ ಚಿರತೆ ಕೇಂದ್ರಕ್ಕೆ ಹೋಗಿದ್ದರು” ಎಂದು ಹೇಳಿರುವ  ಕಾಂಗ್ರೆಸ್, ಟ್ವಿಟರ್‌ ನಲ್ಲಿ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಚಿರತೆಯನ್ನು ಹಿಡಿದಿರುವ ಚಿತ್ರವನ್ನು ಪೋಸ್ಟ್‌ ಮಾಡಿದೆ.
2013 ರಲ್ಲಿ ಚೀತಾ ಮರುಪರಿಚಯ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತು. ಆ ಬಳಿಕ 2020 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ಮತ್ತೆ ಅನುಮತಿಸಿತು, ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆ ‘ಪ್ರಾಜೆಕ್ಟ್ ಚೀತಾ’ಗೆ ದಾರಿ ಮಾಡಿಕೊಟ್ಟಿತು ಎಂದು ಪಕ್ಷವು ಹೇಳಿಕೊಂಡಿದೆ.
ಚೀತಾ ದೊಡ್ಡ ಮಾಂಸಾಹಾರಿ ಪ್ರಾಣಿತಯಾಗಿದ್ದು, ಇದು ಅತಿಯಾದ ಬೇಟೆ ಮತ್ತು ಆವಾಸಸ್ಥಾನಗಳ ನಾಶದಿಂದ ಭಾರತದಿಂದ ಸಂಪೂರ್ಣವಾಗಿ ನಾಶವಾಯಿತು. ಸರ್ಕಾರವು 1952 ರಲ್ಲೇ ಈ  ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಿತು. ಈಗ ಬಿಡುಗಡೆ ಮಾಡಲಾಗಿರುವ ಚಿರತೆಗಳು ನಮೀಬಿಯಾದಿಂದ ಬಂದಿದೆ.  ಈ ವರ್ಷದ ಆರಂಭದಲ್ಲಿ ಸಹಿ ಮಾಡಿದ ಎಂಒಯು ಒಪ್ಪಂದದ ಅಡಿ ಇವುಗಳನ್ನು ತರಲಾಗಿದೆ. “ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನ ಮಂತ್ರಿಯವರು ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!