Monday, October 2, 2023

Latest Posts

ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿಯಿಂದ ಸೋಲಾಯ್ತು: ಎಂ.ಎಸ್.ಸೋಮಲಿಂಗಪ್ಪ

ಹೊಸದಿಗಂತ ವರದಿ, ಬಳ್ಳಾರಿ:

ಕಾಂಗ್ರೆಸ್ ನವರ ಸುಳ್ಳು ಗ್ಯಾರಂಟಿಗಳಿಂದ ನಮಗೆ ಸೋಲಾಯ್ತು, ನಮ್ಮ ಅಭಿವೃದ್ಧಿ ಕೆಲಸಗಳು ಸೋತವು, ಸುಳ್ಳು ಗ್ಯಾರಂಟಿ ಗೆದ್ದಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, 5 ವರ್ಷ ಸುಮ್ಮನೇ ಕೂಡದೇ ಮತ್ತೆ ತಾಲೂಕಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವೆ, ಕ್ಷೇತ್ರದ ಜನರೇ ನನ್ನ ಉಸಿರು, ಅವರಿಗಾಗಿ ಯಾವ ತ್ಯಾಗಕ್ಕೂ ಸಿದ್ದ ಎಂದು ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಕೋಟ್ಯಾಂತರ ರೂ.ಅನುದಾನ ಬಿಡುಗಡೆಯಾಗಿದ್ದು, ಕಳೆದ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ, ಜೊತೆಗೆ ಕ್ಷೇತ್ರದ ಜನರಿಗೆ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜನರ ದನಿಯಾಗಿ ಅವದಿಯಲ್ಲಿ ಕೆಲಸ ಮಾಡಿರುವೆ‌ ಜನರು ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿ ಗಳಿಗೆ ಮರುಳಾದ ಹಿನ್ನೆಲೆ ನಮಗೆ ಸೋಲಾಯ್ತು. ಇದಕ್ಕೆ ಬಗ್ಗುವ ಜಾಯಮಾನ ನಮ್ಮದಲ್ಲ, ಮತ್ತೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವೆ ಎಂದರು.

ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಎನ್ನುವುದು ಶುದ್ಧ ಸುಳ್ಳು, ಇಬ್ಬರೂ ಮಕ್ಕಳು ಹಾಗೂ ನಾನು ಅವದಿಯಲ್ಲಿ ಜನರಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದೇವೆ, ಮಕ್ಕಳ ಹಸ್ತಕ್ಷೇಪ ಎನ್ನುವುದು ಶುದ್ಧ ಸುಳ್ಳು, ಇಬ್ಬರೂ ಮಕ್ಕಳು ನಿರಂತರ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಬದ್ದತೆಯಿಂದ ನಾನು ಅವಧಿಯಲ್ಲಿ ದಕ್ಷ, ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ. ನಮ್ಮ‌ಅಭಿವೃದ್ಧಿ, ನನ್ನ ರಾಜಕೀಯ ಏಳಿಗೆ ಸಹಿಸದ ಕೆಲವರು ಈ ರೀತಿ ಸುಳ್ಳು ಅಪಪ್ರಚಾರ ನಡೆಸುತ್ತಿದ್ದಾರೆ, ಇದಕ್ಕೆ ಕ್ಷೇತ್ರದ ಕಿವಿಕೊಡಬೇಡಿ, ನಿಮ್ಮೊಂದಿಗೆ ನಾನಿರುವೆ, ಯಾವುದೇ ಸಮಸ್ಯೆ ಎದುರಾದರೂ ನಿಮ್ಮೊಂದಿಗೆ ನಾನಿರುವೆ ಎಂದು ತಿಳಿಸಿದರು.

ಅಕ್ರಮಕ್ಕೆ ಅವಕಾಶ ನೀಡಲಿಲ್ಲ, ಇದರಿಂದ ಕೆಲವರು ನನ್ನ ವಿರುದ್ಧ ಚುನಾವಣೆ ವೇಳೆ ಅಪಪ್ರಚಾರ ನಡೆಸಿದರು. ಸೌಹಾರ್ದ ಬ್ಯಾಂಕ್ ನಲ್ಲಿ ಅಕ್ರಮ ನಡೆದ ಬಗ್ಗೆ ಧ್ವನಿ ಎತ್ತಿದೆ, ಇದು ಕಾನೂನು ಬಾಹಿರ, ಇದಕ್ಕೆ ನಾನು ಅವಕಾಶ ನೀಡೋಲ್ಲ ಎಂದು ಖಡಕ್ ಸೂಚನೆ ನೀಡಿದರೇ, ನನ್ನ ವಿರುದ್ಧ ಅಪಪ್ರಚಾರ ನಡೆಸಿದರು. ಇದು ಸೊಲಿಗೆ ಒಂದು ಕಾರಣವಾಯಿತು. ಇದಕ್ಕೆ ಬಗ್ಗುವ ಜಾಯಮಾನ ನನ್ನದಲ್ಲ, ನನ್ನ ರಾಜಕೀಯ ಜೀವನದಲ್ಲಿ ಇಲ್ಲಿವರೆಗೆ ಅಕ್ರಮ ದಂದೆ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ, ನೀಡೋದು, ಜನರ ಆರ್ಶಿವಾದದಿಂದ ಮತ್ತೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!