Sunday, November 27, 2022

Latest Posts

ಕಾಂಗ್ರೆಸ್‍ ಮುಕ್ತ ಕರ್ನಾಟಕ: ನಳಿನ್‍ ಕುಮಾರ್ ಕಟೀಲ್ ವಿಶ್ವಾಸ

ಹೊಸದಿಗಂತ ವರದಿ,ಕಲಬುರಗಿ:

ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣ ಟಿಕೆಟ್ ಕೊಡುವುದಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ನಾವು ಭವಿಷ್ಯದಲ್ಲಿ ನೋಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ವಿರಾಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಹುಲಿಯಾ ಕಾಡಿಗೆ ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆ ಎಂದು ತಿಳಿಸಿದರು. ಸಿದ್ರಾಮಣ್ಣ ನರಹಂತಕರಾಗಿದ್ದರು. ಅವರೀಗ ಟವೆಲ್ ಹಿಡಿದು ಓಡಾಡುತ್ತಿದ್ದಾರೆ. ಅವರು ಮುಂದಿನ ದಿನದಲ್ಲಿ ಶಾಶ್ವತ ನಿರುದ್ಯೋಗಿ ಆಗಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.

ಹಿಂದುಳಿದ ವರ್ಗದವರನ್ನು ಸಿದ್ರಾಮಣ್ಣ ತುಳಿದರು. ಕನಕ ಜಯಂತಿ, ಕನಕನ ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಕಾರಣರು. ಬೊಮ್ಮಾಯಿ ಅವರು ಮೀಸಲಾತಿ ಪ್ರಮಾಣ ಹೆಚ್ಚಿಸಿದರು ಎಂದು ವಿವರಿಸಿದರು. ಈಡಿಗ, ಪರಿವಾರ, ತಳವಾರರ ಸಮಸ್ಯೆ ಪರಿಹರಿಸಿದ ಸರಕಾರ ನಮ್ಮದು ಎಂದು ಮೆಚ್ಚುಗೆ ಸೂಚಿಸಿದರು.

ಸಿದ್ರಾಮಣ್ಣ ಯಾಕೆ ಹಿಂದುಳಿದವರನ್ನು ಕಡೆಗಣಿಸಿದ್ದರು? ಸಿದ್ರಾಮಣ್ಣನಿಗೆ ಕ್ಷೇತ್ರ ಇಲ್ಲವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಬಿಜೆಪಿ ಮಹಾಭಾರತದ ಯುದ್ಧದಲ್ಲಿ ಗೆದ್ದು, ಕರ್ನಾಟಕದ ಕಲ್ಯಾಣ ಮಾಡಲಿದೆ ಎಂದು ತಿಳಿಸಿದರು.

ಬಿಜೆಪಿ ಸರ್ವಸ್ಪರ್ಶಿಯಾಗಿ ಬೆಳೆಯುತ್ತಿದೆ. ಕಲ್ಬುರ್ಗಿಯ ರಸ್ತೆ ರಸ್ತೆಗಳಲ್ಲಿ ಕೇಸರೀಕರಣ ಆಗಿದೆ. ಒಬಿಸಿ ವರ್ಗ ಬಿಜೆಪಿ ಜೊತೆಗಿದೆ ಎಂಬ ಸಂದೇಶ ಅಹಿಂದದ ಸಿದ್ರಾಮಣ್ಣನಿಗೆ ಹೋಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!