ಕಾಂಗ್ರೆಸ್ ಅಂದ್ರೆ ದಲಿತ ವಿರೋಧಿ ಪಕ್ಷ: ಛಲವಾದಿ ನಾರಾಯಣ ಸ್ವಾಮಿ

ಹೊಸದಿಗಂತ ವರದಿ, ರಾಯಚೂರು :

ಕಾಂಗ್ರೆಸ್ ಪಕ್ಷದಲ್ಲಿ ಯಾರೇ ದಲಿತರಿದ್ದರೂ ಅವರು ಗುಲಾಮನಾಗಿರ್ತಾನೆ ಹೊರತು ನಾಯಕನಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನವರೆಗೂ ಕಾಂಗ್ರೆಸ್ ಒಬ್ಬೇ ಒಬ್ಬ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಬಹುದಿತ್ತು. ಕಾಂಗ್ರೆಸ್ಸಿನ ಜಿ.ಪರಮೇಶ್ವರ ಹಾಗೂ ಕೆ.ಎಚ್.ಮುನಿಯಪ್ಪ ಅವರನ್ನಾದರೂ ಮುಖ್ಯಮಂತ್ರಿಗಳನ್ನಾಗಿ ಮಾಡಬಹುದಿತ್ತು ಆದರೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ದಲಿತರಿಗೆ ಅಧಿಕಾರ ಕೊಡುವುದಿದ್ರೆ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಮಾತ್ರ ಅಧಿಕಾರ ನೀಡಿದಂತೆ. ಎಐಸಿಸಿ ಅಧ್ಯಕ್ಷ ಸ್ಥಾನ ದೇಶದಲ್ಲಿ ಅದೊಂದು ಪ್ರಮುಖ ಸ್ಥಾನವಲ್ಲ. ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಅದು ಅಧಿಕಾರ ಅಲ್ಲ ಅದು ಪಕ್ಷದ ಕಚೇರಿ ಕಸ ಗುಡಿಸುವುದಕ್ಕೆ, ಆರ್ಗನೈಸೇಷನ್ ಮಾಡೋದಕ್ಕಷ್ಟೆ. ಪಕ್ಷವನ್ನು ಸದೃಢಗೊಳಿಸಲು ದಲಿತರು ಬೇಕು ಆದರೆ ಅಧಿಕಾರ ಮಾಡಲಿಕ್ಕೆ ಯಾಕೆ ದಲಿತರು ಬೇಡ ಎಂದು ಹರಿಹಾಯ್ದರು.

ಕಾಂಗ್ರೆಸ್ ಅಂದ್ರೆ ಒಂದು ದಲಿತ ವಿರೋಧಿ ಪಕ್ಷ. ಕಾಂಗ್ರೆಸ್ ೬೫ ವರ್ಷಗಳ ಕಾಲ ದೇಶವನ್ನು ಆಳಿದೆ ಅದು ದಲಿತ ವಿರೋಧಿಯಾಗಿ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಅಂತ ನಿಮಗೆ ಗೊತ್ತಿದ್ದರೂ ಕೂಡ ಮಮತಾ ಬ್ಯಾನರ್ಜಿಯವರು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಂದಿನ ಪ್ರಧಾನಿ ಅಂತ ಘೋಷಣೆ ಮಾಡಬೇಕು ಅಂತ. ಇದಕ್ಕೆ ಸಿದ್ದರಾಮಯ್ಯ ಬೇಡ ಬೇಡ ರಾಹುಲ್ ಗಾಂಧಿ ಬೇಕು ಅಂತ. ಅಲ್ಲಿಗೆ ಏನು ದಲಿತ ವಿರೋಧಿ ಮನಸ್ಥಿತಿ ಕಾಂಗ್ರೆಸ್ ನಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!