ಸಾರ್ವಭೌಮತ್ವವನ್ನು ರಕ್ಷಿಸುತ್ತದೆ ಎನ್ನುವ ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಿ ನೋಡುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರಿನ ನಂಜನಗೂಡಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ.
ನೇರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ವಿದೇಶಿ ಶಕ್ತಿಗಳನ್ನು ಭಾರತ ವಿಷಯದಲ್ಲಿ ಮಧ್ಯಪ್ರವೇಶಿಸಲು ಹೇಳುತ್ತಿದೆ. ಈ ಮೂಲಕ ಕಾಂಗ್ರೆಸ್ ಭಾರತದ ಶಕ್ತಿಯನ್ನೇ ಪ್ರಶ್ನಿಸುತ್ತಿದೆ. ಇಲ್ಲಿನ ಆಂತರಿಕ ಸಮಸ್ಯೆಗಳಿಗೆ ವಿದೇಶಿ ಶಕ್ತಿಗಳನ್ನು ಆಮಂತ್ರಿಸುವ ಮೂಲಕ ಕಾಂಗ್ರೆಸ್ ಭಾರತವನ್ನೇ ಅವಮಾನಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಕರ್ನಾಟಕದ ಸಾರ್ವಭೌಮತ್ವವನ್ನು ರಕ್ಷಿಸುತ್ತದೆ ಎಂದು ನಿನ್ನೆ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ. ಹಾಗಿದ್ದರೆ ಇಷ್ಟು ದಿನ ಸಂಸತ್ತಿನಲ್ಲಿ ಕುಳಿತವರೂ ಸಂವಿಧಾನವನ್ನೇ ಅರಿತಿಲ್ಲವೇ.ಸ್ವತಂತ್ರಗೊಂಡ ಬೆನ್ನಲ್ಲೇ ಸಾರ್ವಭೌಮತ್ವ ಸಿಕ್ಕಿದೆ. ಆದರೆ ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಿ ನೋಡುತ್ತಿದೆ. ಟುಕುಡೆ ಟುಕಡೆ ಸಮಸ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಭಾರತ ಜನನಿಯ ತನುಜಾತೆ ಎಂದು ಕುವೆಂಪು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಕರ್ನಾಟಕವನ್ನೇ ಪ್ರತ್ಯೇಕಿಸುವ ಮಾತನಾಡುತ್ತಿದೆ ಎಂದು ಕರ್ನಾಟಕದ ಸಾರ್ವಭೌಮತ್ವವನ್ನೇ ಪ್ರಶ್ನಿಸುವ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರು ರೇಷ್ಮೆ, ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆಹಣ್ಣು ವಿಶ್ವಪ್ರಸಿದ್ಧಿಪಡೆದಿದೆ. ಇಂದು ಇಲ್ಲಿನ ಸ್ಥಳೀಯ ಉತ್ಪನ್ನ, ಸಾಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಜೆಪಿ ಅವರತ ಶ್ರಮ ಪಡುತ್ತಿದೆ. ಆದರೆ ಕಾಂಗ್ರೆಸ್ ಮ್ತ್ರ ಶೇಕಡಾ 85 ರಷ್ಟು ಕಮಿಷನ್ ಪಡೆದು ಅಭಿವೃದ್ಧಿ ಮಾಡದೇ ಮಲಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಚುನಾವಣೆ ಐತಿಹಾಸಿಕ. ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಡೆಯುತ್ತಿರುವ ಚುನಾವಣೆಯಾಗಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಕರ್ನಾಟಕದ ಜನತೆ ಭರವಸೆ ಇಟ್ಟಿದೆ. ಡಬಲ್ ಎಂಜಿನ್ ಸರ್ಕಾರ, ಡಬಲ್ ಸೇವಾ ಮನೋಭಾವ, ಡಬಲ್ ಶಕ್ತಿಯಿಂದ ಕೆಲಸ ಮಾಡುತ್ತಿದೆ.ಕಳೆದ ಕೆಲ ವರ್ಷಗಳಲ್ಲಿ ಇದು ಸಾಬೀತಾಗಿದೆ. ದೇಶದ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದರಿಂದ ಕರ್ನಾಟಕದ ಅಭಿವೃದ್ಧಿಯೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಇಂದು ಭಾರತದ ಆರ್ಥ ವ್ಯವಸ್ಥೆ ವಿಶ್ವದ ಟಾಪ್ 5 ಸ್ಥಾನ ಪಡೆದುಕೊಂಡಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದಾಖಲೆ, ರಫ್ತಿನಲ್ಲಿ ಭಾರತ ದಾಖಲೆ ಬರೆದಿದೆ ಎಂದು ಮೋದಿ ಹೇಳಿದ್ದಾರೆ.

ಇಂದು ಭಾರತದ ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರವಾಗುತ್ತಿದೆ. ಏಷ್ಯಾದ ಅತೀ ದೊಡ್ಡ ಹೆಲಿಕಾಪ್ಟರ್ ಉತ್ಪಾದನೆ ಘಟಕ ಕರ್ನಾಟಕದಲ್ಲಿ ಆರಂಭಗೊಂಡಿದೆ. ಕರ್ನಾಟಕ ಸ್ಟಾರ್ಟ್ಆಪ್ ಕೈಗಾರಿಕೆಗಳ ರಾಜಧಾನಿಯಾಗಬೇಕು. 1 ಲಕ್ಷ ಸ್ಟಾರ್ಟ್ಆಪ್ ಕರ್ನಾಟಕಕ್ಕೆ ಆಗಮಿಸುತ್ತಿದೆ. ಕರ್ನಾಟಕದಲ್ಲಿ 16,000 ಕಿಲೋಮೀಟರ್ ರೈಲ್ವೇ ವಿದ್ಯುದ್ದೀಕರಣ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ, ಹೆದ್ದಾರಿ ಅಭಿವೃದ್ದಿಗಳಿಂದ ಇಲ್ಲಿನ ಉದ್ಯೋಗ ಹೆಚ್ಚಳವಾಗಲಿದೆ. ಇಲ್ಲಿನ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಗರೀಬಿ ಹಟಾವೋ ಗ್ಯಾರೆಂಟಿಯನ್ನು ದಶಕಗಳ ಹಿಂದೆ ನೀಡಿತ್ತು. ಆದರೆ ಇದು ಇತಿಹಾಸದ ಅತೀ ದೊಡ್ಡ ಸುಳ್ಳಿನ ಕಂತೆಯಾಗಿ ಉಳಿದುಕೊಂಡಿದೆ. ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಜನರ ಮುಂದಿಡುತ್ತದೆ. ಹೀಗಾಗಿ ಕಾಂಗ್ರೆಸ್‌ಗೆ ಬಡತನ ಹೋಗಲಾಡಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ವಂದೇ ಭಾರತ್ ರೈಲು ಚಲಿಸುತ್ತಿದೆ. ಭಾರತದಲ್ಲಿ ರೈಲು ನಿಲ್ದಾಣ ನವೀಕರಣ ಹೇಗೆ ಆಗುತ್ತಿದೆ? ಹೊಸ ಹೊಸ ವಿಮಾನ ನಿಲ್ದಾಣ ಹೇಗೆ ನಿರ್ಮಾಣ ಆಗುತ್ತಿದೆ? ಹೆದ್ದಾರಿ, ಅಧುನಿಕ ಮೂಲಭೂತ ಸೌಕರ್ಯ ನಿರ್ಮಾಣ ಹೇಗೆ ಆಗುತ್ತಿದೆ ಅನ್ನೋದು ಕಾಂಗ್ರೆಸ್ ಚಿಂತೆಯಾಗಿದೆ. ಇದಕ್ಕೆ ಮೋದಿ ಹಣ ಎಲ್ಲಿಂದ ತರುತ್ತಿದ್ದಾರೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಇದು ನಿಮ್ಮ ಹಣ. ನಿಮ್ಮ ಹಣದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದೆ. ಇದೇ ಹಣವನ್ನು ಕಾಂಗ್ರೆಸ್ ನುಂಗೀ ನೀರು ಕುಡಿಯುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

ಇಡೀ ವಿಶ್ವವೇ ಭಾರತದಯೋಗ, ಆಯುರ್ವೇದ ಶಕ್ತಿಯನ್ನು ನೋಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಗವನ್ನು ಕಡೆಗಣಿಸಿತ್ತು. ಇಂದು ಇಡೀ ವಿಶ್ವದಲ್ಲಿ ಯೋಗದ ಚರ್ಚೆಯಾಗುತ್ತಿದೆ. ಇಡೀ ವಿಶ್ವವೇ ಯೋಗ ಮಾಡುತ್ತಿದೆ. ಇದಕ್ಕೆ ಕಾರಣವೇನು? ಇದಕ್ಕೆ ಮೋದಿ ಕಾರಣವಲ್ಲ, ನೀವು ನೀಡಿದ ಒಂದು ಮತ ಕಾರಣವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಸಮಯದಲ್ಲಿ ಅರಶಿನ ಹಾಕಿದ ನೀರು ಕುಡಿಯಲು ಹೇಳಿದ್ದೆ. ಇದನ್ನು ಕಾಂಗ್ರೆಸ್ ಟೀಕಿಸಿತ್ತು. ಆದರೆ ಕಾಂಗ್ರೆಸ್ ಕರ್ನಾಟಕದ ರೈತರನ್ನು ಅವಮಾನಿಸಿತ್ತು. ನಮ್ಮ ಮಸಾಲೆ ಬೇಡಿಕೆ ಹೆಚ್ಚಾಗಿದೆ. ಅರಶಿನ, ಶುಂಠಿ ರಫ್ತಿನಲ್ಲಿ ಶೇಕಡಾ 200 ರಷ್ಟು ಹೆಚ್ಚಾಗಿದೆ. ಇದರ ನೇರ ಲಾಭ ಮೈಸೂರಿನ ರೈತರಿಗೆ ಆಗಿದೆ. ಭಾರತದ ಸಂಸ್ಕೃತಿಯಲ್ಲಿ ಕರ್ನಾಟಕ ಒಂದು ಸ್ಥಂಬವಾಗಿದೆ. ನಂಜನಗೂಡು, ಶ್ರೀರಂಗಪಟ್ಟಣ, ಮೈಸೂರು ಸಾಂಸ್ಕೃತಿ ಪರಂಪರೆ ಹೊಂದಿದೆ ಪಟ್ಟಣಗಳು. ಆದರೆ ಕಾಂಗ್ರೆಸ್ ಇವನ್ನು ಅವಮಾನ ಮಾಡುತ್ತಲೇ ಬಂದಿದೆ. ಇದೀಗ ಭಜರಂಗಬಲಿಯನ್ನು ಅವಮಾನ ಮಾಡುತ್ತಿದೆ ಎಂದರು.

ನಮ್ಮ ಸರಕಾರ ಆಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ಸೇರಿದಂತೆ ಹಲವು ಮಂದಿರಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ. ಇದು ಕಾಂಗ್ರೆಸ್‌ಗೆ ಹಿಡಿಸಿಲ್ಲ. ಕೆಲ ದಿನಗಳ ಹಿಂದೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಬಂದಿದ್ದೆ. ಕರ್ನಾಟಕ ಶಕ್ತಿಯನ್ನು ವಿಶ್ವಕ್ಕೆ ಹೇಳಲು ಬಂದಿದ್ದೆ. ಇದನ್ನು ಕಾಂಗ್ರೆಸ್ ಅವಮಾನಿಸಿತ್ತು. ಕಾಂಗ್ರೆಸ್ ಲಿಂಗಾಯಿತ ಸಮುದಾಯವನ್ನು ಅವಮಾನಿಸಿತು. ಕಾಂಗ್ರೆಸ್ ತುಷ್ಟೀಕರಣದ ರಾಜನೀತಿ ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಲಾಭ ನೋಡಿಕೊಂಡು ರಾಜಕಾರಣ ಮಾಡುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!