April 29, 2026
Wednesday, April 29, 2026
spot_img

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಚಿನ್ನದ ಖಜಾನೆ ಕಂಡು ED ಶಾಕ್: 100 ಕೋಟಿ ಅಕ್ರಮ ಸಂಪತ್ತು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಯಿಂದ ಬರೋಬ್ಬರಿ ರೂ. 24 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ಜಪ್ತಿಯೊಂದಿಗೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಒಟ್ಟು ಅಕ್ರಮ ಸಂಪತ್ತಿನ ಮೌಲ್ಯ ರೂ. 100 ಕೋಟಿಗೂ ಅಧಿಕವಾಗಿದೆ.

ಸೆಪ್ಟೆಂಬರ್ 6, 2025 ರಂದು ಚಳ್ಳಕೆರೆಯಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು, ವಿರೇಂದ್ರ ಪಪ್ಪಿಗೆ ಸೇರಿದ ಎಲ್ಲಾ ಬ್ಯಾಂಕ್ ಲಾಕರ್​ ಗಳನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಒಟ್ಟು 24 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಇನ್ನು King 567, Raja 567, Lion 567, Play 567, Playwin 567 ಎನ್ನುವ ಆನ್​ ಲೈನ್ ಬೆಟ್ಟಿಂಗ್ ವೆಬ್​ ಸೈಟ್ ನಡೆಸುತ್ತಿದ್ದನ್ನು ಸಹ ಇಡಿ ಪತ್ತೆ ಹಚ್ಚಿದೆ. ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಮೂಲಕ ದೃಢಪಡಿಸಿದ್ದು,

ಜಾರಿ ನಿರ್ದೇಶನಾಲಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಿಷೇಧಿತ ಆನ್​ಲೈನ್ ಬೆಟ್ಟಿಂಗ್ ವಂಚನೆ ಆರೋಪದಡಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸೇರಿದಂತೆ ಹಲವೆಡೆ ED ದಾಳಿಯಾಗಿತ್ತು. ED ದಾಳಿಯಲ್ಲಿ 24 ಕ್ಯಾರಟ್​ 21.43 ಕೆಜಿ ಚಿನ್ನದ ಬಿಸ್ಕೆಟ್ ಸಿಕ್ಕಿತ್ತು. ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ 1 ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಚಿನ್ನದ ಲೇಪಿತ 10 ಕೆಜಿ 985 ಗ್ರಾಮ್ ಬೆಳ್ಳಿ ಗಟ್ಟಿ ಸೇರಿದಂತೆ ಒಟ್ಟು 24 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ಇಡಿ ಖಚಿತಪಡಿಸಿದೆ.

ಈ ವೆಬ್‌ಸೈಟ್‌ಗಳ ಮೂಲಕ ಬಂದ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದನ್ನು ಸಹ ಇಡಿ ಕಂಡುಹಿಡಿದಿದೆ. ಇನ್ನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಕೋಟ್ಯಾಂತರ ರೂ. ಮೌಲ್ಯದ ಅಂತಾರಾಷ್ಟ್ರೀಯ ಪ್ರವಾಸ ಟಿಕೆಟ್‌ಗಳ ಖರೀದಿ ಹಾಗೂ ಮ್ಯೂಲ್ ಖಾತೆಗಳಿಂದ ಹಣ ಹಂಚಿಕೆ ಆಗಿದ್ದ ಬಗ್ಗೆ ಇಡಿ ಸಾಕ್ಷಿ ಕಲೆಹಾಕಿದೆ.

ಇನ್ನು ದಾಳಿ ವೇಳೆ ವಿರೇಂದ್ರ ಪಪ್ಪಿ ಕುಟುಂಬ ಬಳಸುತ್ತಿದ್ದ ಲಕ್ಸುರಿ ಕಾರುಗಳನ್ನು ಸಹ ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬೇರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರಿನಲ್ಲಿ ಕಾರು ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಅನಿಲ್ ಗೌಡ ಎಂಬುವರ ಹೆಸರಿನಲ್ಲಿ ಬೆಂಜ್, ಫೋನೊಫೆಸಿಯಾ ಕಂಪನಿಯ ಗುಲ್ಯಾನ್ ಖತ್ತರ್ ಹಣ ಹಾಕಿರುವ ರೇಂಜ್ ರೋವರ್ ಕಾರು ಸಹ ಸಿಕ್ಕಿದೆ. ದಾಳಿಯಲ್ಲಿ ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಮೂಲಕ ದೃಢಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !