Wednesday, December 7, 2022

Latest Posts

ಬೋರ್ಗಾಂವ್‌ನಿಂದ ಭಾರತ್‌ ಜೋಡೋ ಯಾತ್ರೆ ಪುನರಾರಂಭ : ರಾಹುಲ್‌ಗೆ ಪ್ರಿಯಾಂಕಾ ಸಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಬೋರ್ಗಾಂವ್‌ನಿಂದ ಪುನರಾರಂಭವಾಗಿದೆ. ಇಲ್ಲಿ 78ನೇ ದಿನದ ಯಾತ್ರೆ. ಮುಂದಿನ 10 ದಿನಗಳಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಎರಡು ದಿನಗಳ ವಿರಾಮದ ಬಳಿಕ ಮತ್ತೆ ನಿನ್ನೆಯಿಂದ ಶುರುವಾಗಿದೆ. ಬುಧವಾರ ಬುರ್ಹಾನ್‌ಪುರ ಬಳಿ ಯಾತ್ರೆ ಮಧ್ಯಪ್ರದೇಶ ರಾಜ್ಯವನ್ನು ಪ್ರವೇಶಿಸಿತ್ತು. ಈ ಪ್ರವಾಸದಲ್ಲಿ ರಾಹುಲ್ ಗಾಂಧಿ ಜೊತೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಿದ್ದು, ಸಹೋದರನಿಗೆ ಪ್ರಿಯಾಂಕಾ ವಾದ್ರಾ ಸಾಥ್‌ ನೀಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!