Wednesday, February 21, 2024

ಕಾಂಗ್ರೆಸ್ ಕೌರವ, ರಾವಣನ ಪಾತ್ರ ವಹಿಸುತ್ತಿದೆ: ಯತ್ನಾಳ್ ಟೀಕೆ

ಹೊಸದಿಗಂತ ವರದಿ, ವಿಜಯಪುರ:

ಮಹಾಭಾರತದಲ್ಲಿ ಪಾಂಡವರು ಕೌರವರು ಇದ್ದರು, ರಾಮಾಯಣದಲ್ಲಿ ರಾವಣ ಇದ್ದ ಹಾಗೇ ಕಾಂಗ್ರೆಸ್ ಕೌರವ, ರಾವಣನ ಪಾತ್ರ ವಹಿಸುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿರೋ ಕಾಂಗ್ರೆಸ್ ವರಿಷ್ಠರ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ಹನುಮಾನನನ್ನು ಎಲ್ಲಿ ನೆನೆಯುತ್ತಾರೆ ಅಲ್ಲಿ ದುಷ್ಟಶಕ್ತಿಗಳು, ಪಿಶಾಚಿಗಳು, ನೀಚರು ಹನುಮಾನ ಚಾಲೀಸ್ ನಿಂದ ನಾಶವಾಗಿ ಓಡಿ ಹೋಗುತ್ತಾರೆ ಎಂದರು.

ಅಯೋಧ್ಯ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳ ವಿರೋಧ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರವರೊಳಗೆ ಬಿಟ್ಟದ್ದು ಎಂದರು.

ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ಭಾರತದಲ್ಲಿ ಹೊಸ ಹಿಂದುಯುವ ಆರಂಭವಾಗುತ್ತದೆ. ಇಡೀ ವಿಶ್ವದಲ್ಲೇ ಹಿಂದುಯುಗ ಆರಂಭವಾಗಲಿಗೆ. ಹಿಂದು ಧರ್ಮದ ವಿರೋಧಿಗಳಿಗೆ ರಾಮಜನ್ಮ ಭೂಮಿ ಮೂಲಕ ಉತ್ತರ ನೀಡಲಾಗುತ್ತದೆ. ಸನಾತನ ಧರ್ಮ ಜಗತ್ತನ್ನು ಪಸರಿಸುತ್ತದೆ ಎಂದರು.
ಉಳಿದ ಧರ್ಮದವರೂ ಸಹ ಸನಾತನ ಧರ್ಮಕ್ಕೆ ಬರುತ್ತಾರೆ. ಜಗತ್ತೇ ಹಿಂದು ಧರ್ಮವಾಗುತ್ತದೆ ಎಂದರು.

ರಾಮಮಂದಿರ ಉದ್ಘಾಟನೆ ಬಳಿಕ ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಯಾವಾಗ ಸಮಯ ಸಿಗುತ್ತದೆಯೋ ? ಆಗ ಹೋಗಲಿ. ಒಟ್ಟಾರೆ ಅಯೋಧ್ಯೆಗೆ ಹೋಗುತ್ತಾರಲ್ಲಾ. ಕಾಂಗ್ರೆಸ್ ನ ಒಬ್ಬರಿಗೂ ದೈರ್ಯವಿಲ್ಲಾ ಎಂದು ದೂರಿದರು.

ನಾನೇನಾದರೂ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಹೈಕಮಾಂಡ್ ನಿರ್ಧಾರ ಧಿಕ್ಕರಿಸುತ್ತಿದ್ದೆ, ನಾನು ಆಯೋಧ್ಯೆಗೆ ಹೋಗುತ್ತಿದ್ದೇ, ಆಯೋಧ್ಯೆ, ಮಥುರಾ, ಕಾಶಿ ನಮ್ಮ ಸನಾತನ ಧರ್ಮದ ಮಹಾ ಪುರುಷರು. ರಾಮಮಂದಿರವನ್ನು ಬಿಜೆಪಿಯವರು, ವಿಎಚ್’ಪಿಯವರು ಆರ್ ಎಸ್ ಎಸ್ ನವರು ಮಾಡಿದ್ದಾರೆಂದು ಕಾಂಗ್ರೆಸ್ ನವರು ನೋಡಬಾರದಾಗಿತ್ತು. ನೀವು ರಾಮನ ಭಕ್ತರಲ್ಲಾ, ನೀವು ರಾಮನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ದೀರಿ, ಈಗಾ ರಾಮ ಇದ್ದಾನೆ, ನಾನು ನೀನು ರಾಮಭಕ್ತರೆಂಬ ಪೈಪೋಟಿ ನಡೆದಿದೆ. ಶ್ರೀರಾಮ ಭಾರತದ ಮೂಲ ಪುರುಷ, ರಾಮನನ್ನು ಬಿಟ್ಟು ಭಾರತವಿಲ್ಲ, ಭಾರತವನ್ನು ಬಿಟ್ಟು ರಾಮನಿಲ್ಲ ಎಂದರು.

ಹೈಕಮಾಂಡ್ ಹೇಳಿದರೆ ರಾಮಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ವಿಚಾರ ಬಗ್ಗೆ, ಪರಮೇಶ್ವರ ಬಗ್ಗೆ ಗೌರವವಿದೆ, ರಾಜ್ಯದ ಸುಸಂಸ್ಕೃತ ರಾಜಕಾರಣಿಯಾಗಿದ್ದಾರೆ. ಅವರಿಂದ ಇದನ್ನು ನಾನು ನಿರೀಕ್ಷೆ ಮಾಡಲ್ಲಾ ಎಂದರು.

ನಿತ್ಯ ರಾಮನಾಮ ಸ್ಮರಣೆ ಮಾಡುವೆ ಎಂದು ಕೆ ಎಚ್ ಮುನಿಯಪ್ಪರ ಹಾಗೇ ಇವರೂ ಹೇಳಬೇಕಿತ್ತು, ಹಿಂದೂಗಳು ಸಹ ನಿಮಗೆ ಮತ ಹಾಕಿದ್ದಾರೆ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇನೆಂಬ ಹೇಳಿಕೆ ಮೂರ್ಖತನದ್ದು, ನಾಳೆ ಸಾಯಬೇಕಾದರೂ ಹೈಕಮಾಂಡ್ ಪರ್ಮಿಷನ್ ಬೇಡೋ ಪರಸ್ಥಿತಿ ಇದೆ. ಗುಲಾಮಗಿರಿ ಸಂಕೇತವೇ ಕಾಂಗ್ರೆಸ್ ಎಂಬುದಕ್ಕೆ ಪರಮೇಶ್ವರ ಹೇಳಿಕೆ ಕಾಂಗ್ರೆಸ್ ಸಂದೇಶ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!