ಕೆಲವೇ ವರ್ಷದಲ್ಲಿ ಕಾಂಗ್ರೆಸ್ ನಶಿಸಿಹೋಗಲಿದೆ: ಸಚಿವ ಆರ್.ಅಶೋಕ್

ದಿಗಂತ ವರದಿ ಮೈಸೂರು:

ದೇಶದಲ್ಲಿ ಕಾಂಗ್ರೆಸ್  ಜನರಿಂದ ತಿರಸ್ಕೃತಗೊಳ್ಳುತ್ತಿದ್ದು, ಇನ್ನು ಕೆಲವು ವರ್ಷಗಳಲ್ಲಿ ಇಡೀ ಕಾಂಗ್ರೆಸ್ ಪಕ್ಷವೇ ನಶಿಸಿ ಹೋಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಗುರುವಾರ ಮೈಸೂರು ಜಿಲ್ಲೆಯ ತಿ.ನರಸೀಪುರ ದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡದ ಅವರು, ನಮ್ಮ ದೇಶದ ಪಾರ್ಲಿಮೆಂಟ್ ಅಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದಾದರೆ ನಾವೇಕೆ ಟಿ ನರಸೀಪುರದಲ್ಲಿ ಬಿಜೆಪಿ ಯನ್ನು ಗೆಲ್ಲಿಸಬಾರದು ಎಂದು ಯೋಚಿಸಬೇಕು ಎಂದರು.

ಕಾಂಗ್ರೆಸ್ ದೇಶದಲ್ಲಿ ನಶಿಸಿ ಹೋಗುತ್ತಿದೆ. ಕರ್ನಾಟಕದಲ್ಲಿಯೂ ಸಹ 2023 ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ತಂದೇ ತರುತ್ತೇವೆ. ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಭಾಜಪಾ ವನ್ನು ಗೆಲ್ಲಿಸುವ ಗುರಿ ನಮ್ಮದಾಗಬೇಕು. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಪೇಜ್ ಪ್ರಮುಖ್ ಮಾಡಿದ್ದೇವೆ. ಒಂದು ಪೇಜ್ ಅಲ್ಲಿ 20 ಮನೆ ಬರುತ್ತದೆ ಆ 20 ಮನೆಯ ಜವಾಬ್ದಾರಿ ಆ ಪೇಜ್ ಪ್ರಮುಖನದ್ದಾಗಿರುತ್ತದೆ ಎಂದು ಹೇಳಿದರು. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ನಮ್ಮ ಸರ್ಕಾರ ಕರ್ನಾಟಕದಲ್ಲಿ ಹಲವಾರು ಜನಪರ ಯೋಜನೆಯನ್ನು ತರುತ್ತಿದ್ದೇವೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಯೋಜನೆಯನ್ನು ತಂದಿದ್ದೇವೆ. ಮಾ. 12 ರಂದು ಲಕ್ಷಾಂತರ ರೈತ ಕುಟುಂಬಕ್ಕೆ ನೆರವಾಗುವ ಯೋಜನೆಯನ್ನು ಉದ್ಘಾಟನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಾಗಿರುವುದು ಬೂತ್ ಅಧ್ಯಕ್ಷರು, ಕಾರ್ಯಕರ್ತರುಗಳು.  ಜನರಿಗೆ ಬಿಜೆಪಿ ಸರ್ಕಾರ ಬರಬೇಕೆಂಬ ಅಭಿಲಾಷೆ ಮೂಡಬೇಕು ಆ ರೀತಿ ನಾವು ತಳಮಟ್ಟದಲ್ಲಿ ಜನರನ್ನು ಮುಟ್ಟುವ ಕೆಲಸ ಮಾಡಬೇಕು.  ಬಿಜೆಪಿಯನ್ನು ಬೆಳೆಸುವ ಎಲ್ಲಾ ಜವಾಬ್ದಾರಿ ನಮ್ಮದಿದೆ ಎಂದರು.

ಇದೇ ಸಂದರ್ಭದಲ್ಲಿ ವರುಣ ಕ್ಷೇತ್ರದಿಂದ ಟಿ. ನರಸೀಪುರ ಕ್ಷೇತ್ರಕ್ಕೆ ವಿಸ್ತಾರಕರಾಗಿ ಬಂದಿರುವ ವಿಸ್ತಾರಕರಿಗೆ ಸನ್ಮಾನ ಮಾಡಲಾಯಿತು. ಹಲವಾರು ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಸಚಿವ ಆರ್ ಅಶೋಕ್ ಹಾಗೂ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಸೇರಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!