ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಮತ್ತು I.N.D.I.A ಒಕ್ಕೂಟಕ್ಕೆ ಸಂವಿಧಾನ ದೇಶದ DNA ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸಂವಿಧಾನದ ಖಾಲಿ ಪ್ರತಿ ಎಂಬ ಬಿಜೆಪಿಯ ಟೀಕೆಗೆ ಪ್ರತ್ಯುತ್ತರ ನೀಡಿದ ಅವರು, ಈ ಹೋರಾಟವು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು I.N.D.I.A ಒಕ್ಕೂಟ ಇದೆ ಇನ್ನೊಂದು ಕಡೆ ಬಿಜೆಪಿ-ಆರ್‌ಎಸ್‌ಎಸ್ ಇದೆ. ದೇಶವು ಸಂವಿಧಾನದ ಮೂಲಕ ನಡೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ ಪ್ರಧಾನಿ ಏನನ್ನೂ ಬರೆಯದೆ ಖಾಲಿ ಪುಸ್ತಕ ಎಂದು ಹೇಳುತ್ತಾರೆ. ಈ ಪುಸ್ತಕವು ಆರ್‌ಎಸ್‌ಎಸ್-ಬಿಜೆಪಿಗೆ ಮಾತ್ರ ಖಾಲಿಯಾಗಿದೆ, ನಮಗೆ ಇದು ದೇಶದ ಡಿಎನ್‌ಎ ಎಂದು ರಾಹುಲ್ ಗಾಂಧಿ ಹೇಳಿದರು.
ಸಂವಿಧಾನವು ಅಂಬೇಡ್ಕರ್, ಫುಲೆಜಿ, ಶಿವಾಜಿ ಮಹಾರಾಜ್, ಭಗವಾನ್ ಬುದ್ಧ, ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಒಳಗೊಂಡಿದೆ. ಇದು ನಮಗೆ ಬರೀ ಪುಸ್ತಕವಲ್ಲ, ನಮಗೆ ಇದು ಸಾವಿರಾರು ವರ್ಷಗಳ ಹಿಂದಿನ ಚಿಂತನೆ ಮತ್ತು ಅದರಲ್ಲಿ ಏನು ಬರೆಯಲಾಗಿದೆ ಅದಕ್ಕಾಗಿ ಭಾರತದಲ್ಲಿ ಜನರು ಸಾವಿರಾರು ವರ್ಷಗಳಿಂದ ಸಾಯುತ್ತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಜನರ ಸರ್ಕಾರವನ್ನು ಆಡಳಿತ ಪಕ್ಷವು ರಾಜ್ಯದ ಜನತೆಯಿಂದ ಕದ್ದಿದೆ. ಪ್ರಧಾನಿ ಮತ್ತು ಬಿಜೆಪಿಯವರು ಮುಚ್ಚಿದ ಕೋಣೆಗಳಲ್ಲಿ ಈ ಸಂವಿಧಾನವನ್ನು ರಹಸ್ಯವಾಗಿ ಹತ್ಯೆ ಮಾಡಿದ್ದಾರೆ. ಅದಾನಿ ಜೊತೆಗೆ ನಡೆದ ಸಭೆಯಲ್ಲಿ ಶಾಸಕರನ್ನು ಕೋಟ್ಯಂತರ ರೂಪಾಯಿಗಳಿಗೆ ಖರೀದಿಸಲು ನಿರ್ಧರಿಸಲಾಯಿತು.
ಮಹಾರಾಷ್ಟ್ರದ ಸರ್ಕಾರವನ್ನು ಜನರಿಂದ ಏಕೆ ಕದ್ದಿದೆ ಎಂದು ನಾನು ನಿಮಗೆ ಹೇಳುತ್ತೇನೆ. ನಮ್ಮ ಸರ್ಕಾರವನ್ನು ‘ಧಾರಾವಿ’ಗಾಗಿ ಕದಿಯಲಾಗಿದೆ. ಬಿಜೆಪಿಯ ಜನರು – ಪ್ರಧಾನಿ ಮೋದಿ, ಅಮಿತ್ ಶಾ, ಧಾರಾವಿಯ ಬಡವರ ಭೂಮಿಯನ್ನು ಅದಾನಿಗೆ ನೀಡಲು ಬಯಸಿದ್ದರು. ಹೀಗಾಗಿ ಸ್ನೇಹಿತ ಗೌತಮ್ ಅದಾನಿ ಮಹಾ ಸರ್ಕಾರವನ್ನು ಕೆಡವಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.