Sunday, December 10, 2023

Latest Posts

ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕವಾದ “ಚುಂಗ್ರಿ”

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಂಡಮಾರುತ ಪರಿಣಾಮ ಕಳೆದ ಸುಮಾರು ಒಂದು ವಾರದಿಂದೀಚೆಗೆ ಕರಾವಳಿ ಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಇದರ ಪರಿಣಾಮ ವಿಷಕಾರಿ, ನಂಜಿನ ಸಮುದ್ರ ಜೀವಿ ಚುಂಗ್ರಿ (ಮುಳ್ಳುಗೆರೆ) ದಡದತ್ತ ದೌಡಾಯಿಸುತ್ತಿದ್ದು, ಇದು ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಎಲ್ಲೆಲ್ಲಾ ಚುಂಗ್ರಿ ಹಾವಳಿ?
ಗಂಗೊಳ್ಳಿ, ಮರವಂತೆ ಹಾಗೂ ಕೊಡೇರಿ, ಸೇರಿದಂತೆ ಈ ಭಗಾದ ಕರಾವಳಿ ತೀರ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಮೀನುಗಾರಿಕೆಗೆ ಇಳಿದಿದ್ದ ಬಹುತೇಕ ಮೀನುಗಾರರ ಬಲೆಗೆ ಚುಂಗ್ರಿ ಹಾವಳಿ ನಡೆಸುತ್ತಿದೆ. ಸಂಕಷ್ಟ ಇನ್ನಷ್ಟು ಹೆಚ್ಚಿಸುತ್ತಿದೆ.
ಚುಂಗ್ರಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ರೂ. ನಷ್ಟ ಅನುಭವಿಸುವಂತಾಗಿದೆ.
ಚುಂಗ್ರಿ ಎಂದರೆ…
ಕುಂದಾಪ್ರ ಕನ್ನಡ, ಕೊಂಕಣಿ ಭಾಷೆಯಲ್ಲಿ ಚುಂಗ್ರಿ ಎಂದು ಕರೆಯಲ್ಪಡುವ ಇದು ಮುಳ್ಳು ಹಂದಿಗಳಂತೆ  ನಂಜು, ವಿಷಕಾರಿ ಮುಳ್ಳು ಹೊಂದಿವೆ. ಇದು ಬಲೆಯನ್ನು ನಾಶ ಮಾಡಿಬಿಡುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗೆ ಬಳಸುವ ಬಲೆಯು ತುಂಬಾ ಸೂಕ್ಷ್ಮವಾಗಿದ್ದು, ಚುಂಗ್ರಿಯಂತಹ ಜಲಚರಗಳು ಸಿಕ್ಕಿ ಹಾಕಿಕೊಂಡರೆ ಬಲೆ ಹರಿಯುತ್ತದೆ. ಫಿಶಿಂಗ್, ಪರ್ಸಿನ್ ಬೋಟುಗಳ ಬಲೆಗೆ ಬಿದ್ದರೆ ಅದನ್ನು ಪುನ: ಸಮುದ್ರದಲ್ಲೇ ಬಿಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!