ಹೊಸದಿಗಂತ ವರದಿ, ಕೊಡಗು:
ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಕಳೆದ ಎರಡು ದಿನಗಳಲ್ಲಿ ಎರಡು ಹಸುಗಳನ್ನು ಬಲಿ ಪಡೆದುಕೊಂಡಿದೆ.
ಗುರುವಾರ ರಾತ್ರಿ ತೂಚಮಕೇರಿಯ ಚಿಂಡಮಾಡ ವಿಶು ಎಂಬವರ ಹಸುವನ್ನು ಬಲಿ ತೆಗೆದುಕೊಂಡಿದ್ದ ವ್ಯಾಘ್ರ, ಶುಕ್ರವಾರ ರಾತ್ರಿ ಪುಟ್ಟಂಗಡ ಚೇತನ್ ಅವರ ಹಸುವನ್ನು ಕೊಂದು ಹಾಕಿದೆ.
ಸರಣಿ ಹುಲಿ ದಾಳಿಯ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಹಾಗೂ ರೈತ ಸಂಘದ ಪ್ರಮುಖರು, ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.