ವೀಕೆಂಡ್‌ ರೂಲ್ಸ್‌ ಗೆ ಡೋಂಟ್‌ ಕೇರ್‌ ಎಂದ ಹೋಟೆಲ್‌ ಮಾಲಿಕರು: ಎಸಿ ಹಾಲ್ ನಲ್ಲಿ ಕುಳಿತು ಉಪಹಾರ

ಹೊಸದಿಗಂತ ವರದಿ, ಕಲಬುರಗಿ:

ವಾರಾಂತ್ಯ ಕರ್ಫ್ಯೂ ನಿಮಿತ್ತ ರಾಜ್ಯ ಸರ್ಕಾರ ಹೋಟೆಲ್ ಗಳಲ್ಲಿ, ಪಾರ್ಸಲ್ ವ್ಯವಸ್ಥೆ ಆನುವು ಮಾತ್ರಮಾಡಿಕೊಟ್ಟಿದೆ.‌ ಆದರೆ ಕಲಬುರಗಿ ಯ ಹೋಟೆಲ್ ಮಾಲೀಕರು ಮಾತ್ರ, ರೂಲ್ಸ್ ಗಳಿಗೆ ಕ್ಯಾರೇ ಎನ್ನದೇ ಹೋಟೆಲ್ ಒಳಗಡೆ ಎಸಿ ಹಾಲ್ ನಲ್ಲಿ ಕುಳಿತುಕೊಂಡು ಕದ್ದು ಮುಚ್ಚಿ ಉಪಹಾರ ಸೇವಿಸಲು ಅವಕಾಶ ಮಾಡಿಕೊಟ್ಟಿರುವುದು ಬಂದಿದೆ.
ಹೋಟೆಲ್ ಒಳಗಡೆ ಜನರನ್ನು ಕೂರಿಸಿ, ಉಪಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ನಗರದ ಅನ್ನಪೂರ್ಣ ಕ್ರಾಸ್ ಬಳಿ ಇರುವ ಸೆಂಟರ್ ಕಾಮತ್ ಹೋಟೆಲ್‌ ನಲ್ಲಿ ಈ ಘಟನೆ ನಡೆದಿದೆ.
ಜನರಿಗೆ ಎಸಿ ಹಾಲ್ ಒಳಗೆ ಬಿಟ್ಟು, ಹೊರಗಡೆ ಬಾಗಿಲು ಮುಚ್ಚಿ, ಉಪಹಾರ ನೀಡಿದ್ದಾರೆ. ಪಾರ್ಸಲ್‌ ಗೆ ಮಾತ್ರ ಸರ್ಕಾರ ರೂಲ್ಸ್‌ ಮಾಡಿದ್ದರೂ, ಹೋಟೆಲ್ ಮಾಲೀಕರು ಮಾತ್ರ ಸರಕಾರದ ಗೈಡ್ ಲೈನ್ಸ್ ಗೆ, ರೂಲ್ಸ್ ಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಅದರಂತೆ ಹೋಟೆಲ್ ನವರಿಗೆ ಜಿಲ್ಲಾಡಳಿತದ ಯಾವುದೇ ಭಯವಿಲ್ಲ ಎನ್ನುವುದು ಕಂಡು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!