October 9, 2026
Friday, October 9, 2026
spot_img

ಗೋಕರ್ಣ ಸುತ್ತಮುತ್ತಲಿನ ಪರಿಸರದಲ್ಲಿ ನಿರಂತರ ಮಳೆ: ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ

ಹೊಸದಿಗಂತ ವರದಿ ಗೋಕರ್ಣ:

ಪುಣ್ಯಕ್ಷೇತ್ರ ಗೋಕರ್ಣ ಸುತ್ತ ಮುತ್ತಲಿನ ಪರಿಸರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಮಳೆಯಿಂದಾಗಿ ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದೆ.
ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಗುಡ್ಡದ ಕಲ್ಲು ಮಣ್ಣು ರಸ್ತೆಯಲ್ಲಿ ತುಂಬಿಕೊಂಡಿದ್ದು ಗಿಡಮರಗಳು ಬುಡ ಸಮೇತ ರಸ್ತೆಗೆ ಒರಗಿವೆ.

ಗುಡ್ಡ ಕುಸಿತವಾದ ಸ್ಥಳದಲ್ಲಿ ಜಲಪಾತದಂತೆ ನೀರು ಹರಿಯುತ್ತಿದ್ದು ಇನ್ನಷ್ಟು ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಗುಡ್ಡದ ಕಲ್ಲು ಮಣ್ಣುಗಳು ರಸ್ತೆಯಲ್ಲಿ ತುಂಬಿದ್ದರಿಂದ ತದಡಿಯಿಂದ ಗೋಕರ್ಣ, ಅಂಕೋಲಾ ಕಡೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Must Read