ಈ ದಿನ ಚಂದ್ರನನ್ನು ನೋಡಿದ್ರೆ ಕಳಂಕ ಹೊತ್ತುಕೊಳ್ಳಬೇಕಾದೀತು ಜೋಕೆ!!

ಹೊಸದಿಗಂತ ಡಿಜಿಟಲ್‌ಡೆಸ್ಕ್:‌ 

ಗಣೇಶ ಚತುರ್ಥಿಯಂದು ಚಂದ್ರನನ್ನು ದರ್ಶನ ಮಾಡಿದ್ರೆ ಕಳಂಕ ತಗುಲುವುದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ದಿನ ಚಂದ್ರನನ ಕಂಡರೆ ಆ ವ್ಯಕ್ತಿಯು ಕಳ್ಳತನದ ಸುಳ್ಳು ಆರೋಪವನ್ನು ಹೊರಬೇಕಾಗುತ್ತದೆ. ಇದೆ ಕಾರಣಕ್ಕೆ ಇದನ್ನು ಕಳಂಕ ಚತುರ್ಥಿ ಎಂದೂ ಕರೆಯಲಾವುದು. ಹೊಟ್ಟೆ ತುಂಬಾ ತಿಂದು ಓಡಾಡುವಾಗ ಗಣೇಶ ಬಿದ್ದಿದ್ದನ್ನು ಕಂಡ ಚಂದ್ರ ನಗುತ್ತಾನೆ. ಅಷ್ಟಕ್ಕೇ ಸುಮ್ಮನಾಗದೆ ಗಣೇಶನನ್ನು ಅಪಹಾಸ್ಯ ಮಾಡಿದ್ದಕ್ಕೆ ಗಣೇಶ ಕೋಪಗೊಂಡು ಚಂದ್ರನಿಗೆ ನೀನು ಯಾವಾಗಲೂ ಕಪ್ಪಾಗಿರು ಎಂದು ಶಾಪ ಹಾಕುತ್ತಾನೆ. ಅಲ್ಲದೇ ಗಣೇಶ ಚತುರ್ಥಿಯಂದು ನಿನ್ನನ್ನು ನೋಡುವವರು ಸುಳ್ಳು ಕಳಂಕವನ್ನು ಹೊತ್ತಕೊಳ್ಳಬೇಕಾಗುತ್ತದೆ ಎಂದನು. ಈ ಕಾರಣಕ್ಕಾಗಿ, ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಬಾರದು ಎನ್ನುತ್ತಾರೆ.

ಗಣಪನ ಶಾಪದ ಪ್ರಭಾವದಿಂದ ಚಂದ್ರನ ಸೌಂದರ್ಯ ಕಪ್ಪಾಗಿ ಬಿಡುತ್ತದೆ. ನಂತರ ಚಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಗಣಪನ ಬಳಿ ಕ್ಷಮೆ ಕೇಳುತ್ತಾನೆ. ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಶ್ಯಮಂತಕ ಎಂಬ ಅಮೂಲ್ಯ ರತ್ನವನ್ನು ಕದ್ದಿದ್ದಾನೆಂದು ಸುಳ್ಳು ಆರೋಪ ಹೊರಬೇಕಾಯಿತು. ಸುಳ್ಳು ಆರೋಪದಿಂದ ಕಂಗೆಟ್ಟ ಶ್ರೀಕೃಷ್ಣನ ಸ್ಥಿತಿಯನ್ನು ನೋಡಿದ ನಾರದ ಮುನಿಯು ತಾನು ಭಾದ್ರಪದ ಶುಕ್ಲ ಚತುರ್ಥಿಯ ದಿನ ಚಂದ್ರನನ್ನು ನೋಡಿದ್ದಕ್ಕೆ ಈ ಶಾಪ ತಟ್ಟಿದೆ ಎಂದು ಕೃಷ್ಣನಿಗೆ ವಿವರಿಸಿದ.

ಭಾದ್ರಪದ ಶುಕ್ಲ ಚತುರ್ಥಿಯಂದು ಚಂದ್ರನ ದರ್ಶನ ಪಡೆದ ವ್ಯಕ್ತಿಯು ಸುಳ್ಳು ದೋಷಗಳಿಂದ ಶಾಪಗ್ರಸ್ತನಾಗುತ್ತಾನೆ ಸಮಾಜದಲ್ಲಿ ಕಳ್ಳತನದ ಸುಳ್ಳು ಆರೋಪಗಳಿಂದ ಕಳಂಕಿತನಾಗುತ್ತಾನೆ ಎಂದು ಗಣಪತಿ ಚಂದ್ರ ದೇವರಿಗೆ ಶಾಪ ನೀಡಿದ್ದಾನೆ ಎಂದು ಶ್ರೀ ಕೃಷ್ಣನು ನಾರದ ಮುನಿಗೆ ಹೇಳಿದನು.

ಇದೇ ಕಾರಣಕ್ಕೆ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಅಪ್ಪಿ-ತಪ್ಪಿ ಕೂಡ ಚಂದ್ರನನ್ನು ನೋಡಬಾರದು. ನೋಡಿದಲ್ಲಿ ಸುಳ್ಳು ಆರೋಪಗಳನ್ನು ಎದುರಿಸಬೇಕಾಗುತ್ತದೆ. ಅಕಸ್ಮಾತ್ ಚಂದ್ರನನ್ನು ನೋಡಿದ್ದರೆ, ಗಣೇಶನ ಮಂತ್ರವನ್ನು ಪಠಿಸಿ, ಸಂಕಷ್ಟ ಚತುರ್ಥಿಯನ್ನು ಮಾಡುವ ಮೂಲಕ ಅದರ ನಿವಾರಣೆ ಮಾಡಿ, ಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸಿ, ನಿತ್ಯ ಶ್ಲೋಕ ಪಠಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!