ಕುಕ್ಕರ್ ಬಾಂಬ್ ಬ್ಲಾಸ್ಟ್: ಮೂರು ಲೀಟರ್‌ನ ಆ ಕುಕ್ಕರ್ ಒಳಗಡೆ ಇದ್ದಿದ್ದಾದರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಲಸ್ ಮತ್ತು ಮೈನಸ್ ಸಂಪರ್ಕ ಸರಿಯಾಗಿ ನಡೆಯದೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಆಗಿದ್ದೇ ಮಂಗಳೂರಲ್ಲಿ ಸಂಭವಿಸಿದ ‘ಕುಕ್ಕರ್ ಬಾಂಬ್’ ಸ್ಫೋಟಕ್ಕೆ ಕಾರಣ ಎನ್ನುವ ಅಂಶವನ್ನು ವಿಧಿ ವಿeನ ಪ್ರಯೋಗಾಲಯದ ಪ್ರಾಥಮಿಕ ವರದಿ ಬಹಿರಂಗಪಡಿಸಿದೆ.

3 ಲೀಟರ್ ಕುಕ್ಕರ್ ಒಳಗಡೆ ಸ್ಫೋಟಕದ ಜೆಲ್ ಇತ್ತು. ಪೊಟ್ಯಾಷಿಯಂ, ಜಿಲೆಟಿನ್ ಕಡ್ಡಿ ಸೇರಿದಂತೆ ರಾಸಾಯನಿಕಗಳನ್ನು ಬಳಸಿದ್ದ. ಇದರ ಜತೆ ಒಂದು ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. ಡಿಟೋನೇಟರ್‌ಗೆ ಪವರ್ ಪೂರೈಕೆಯಾಗದೆ ಕೇವಲ ಜೆಲ್‌ಗೆ ಮಾತ್ರ ಬೆಂಕಿ ತಗುಲಿದೆ. ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಉಂಟಾಗಿದೆ. ಡಿಟೋನೇಟರ್ ಮತ್ತು ಜೆಲ್ ಎರಡಕ್ಕೂ ಏಕಕಾಲದಲ್ಲಿ ಬೆಂಕಿ ತಗುಲಿದ್ದರೆ ಊಹಿಸಲಾರದಷ್ಟು ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಇಡೀ ಕುಕ್ಕರ್ ಬಾಂಬ್ ತೀವ್ರವಾಗಿ ಸಿಡಿದಿದ್ದರೆ ಶಾರಿಕ್ ಸಮೇತ ಇಡೀ ಪ್ರದೇಶದಲ್ಲಿ ರಕ್ತದೋಕುಳಿಯಾಗುತ್ತಿತೆಂಬ ಮಾಹಿತಿಯೂ ಈಗ ತನಿಖಾದಳಕ್ಕೆ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!