ಇನ್ಮುಂದೆ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಫೇಕ್‌ ರಿವ್ಯೂ ಹಾಕುವಂತಿಲ್ಲ: ಗ್ರಾಹಕರ ಹಿತರಕ್ಷಣೆಗೆ ಸರ್ಕಾರದಿಂದ ಹೊಸ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇ-ಕಾಮರ್ಸ್‌ ಕಂಪನಿಗಳಲ್ಲಿ ನಕಲಿ ರಿವ್ಯೂಗಳನ್ನು ಹಾಕಿ ಗ್ರಾಹಕರನ್ನು ಯಾಮಾರಿಸುವುದನ್ನು ತಡೆಗಟ್ಟಲು ಸರ್ಕಾರವು ಹೊಸ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಗ್ರಾಹಕರ ಹಿತ ಕಾಪಾಡುವ ದೃಷ್ಟಿಯಿಂದ ಹೊಸ ನಿಯಮಾವಳಿ ಮತ್ತು ಚೌಕಟ್ಟನ್ನು ನಿರ್ಮಿಸಿದ್ದು ಆ ಮೂಲಕ ನಕಲಿವಿಮರ್ಶೆಗಳನ್ನು ಪ್ರಕಟಿಸದಂತೆ ತಾಕೀತು ಮಾಡಲು ಮುಂದಾಗಿದೆ.

ಇ-ಕಾಮರ್ಸ್ ಸೈಟ್‌ಗಳ ಮೂಲಕ ಮಾರಾಟವಾಗುವ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ನಕಲಿ ಮತ್ತು ಮೋಸಗೊಳಿಸುವ ವಿಮರ್ಶೆಗಳು ಮತ್ತು ಪರಿಶೀಲಿಸದ ಸ್ಟಾರ್ ರೇಟಿಂಗ್‌ಗಳಿಂದ ಗ್ರಾಹಕರನ್ನು ರಕ್ಷಿಸಲು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹೊಸ ಮಾನದಂಡಗಳನ್ನು ಜಾರಿಗೆ ತರಲಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪ್ರಕಾರ, ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಉದ್ಯಮ ಸಂಘಗಳೊಂದಿಗೆ ಸಮಾಲೋಚಿಸಿ ಮಾನದಂಡಗಳನ್ನು ರೂಪಿಸಲಾಗಿದ್ದು ಇವು ಸ್ವಯಂಪ್ರೇರಿತವಾಗಿ ಪ್ರಾರಂಭವಾಗುತ್ತವೆ. ಗ್ರಾಹಕ ವಿಮರ್ಶೆಗಳನ್ನು ಪ್ರಕಟಿಸುವ ಪ್ರತಿಯೊಂದು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಈ ಮಾನದಂಡವು ಅನ್ವಯಿಸುತ್ತದೆ.

ನವೆಂಬರ್‌ 26 ರಿಂದ ಈ ಮಾನದಂಡಗಳು ಜಾರಿಗೆ ಬರಲಿದ್ದು ಆನ್‌ ಲೈನ್‌ ನಲ್ಲಿ ವಿಮರ್ಶಗೆಗಳನ್ನು ಪ್ರಕಟಿಸುವ ಲೇಖಕರ ಪರಿಶೀಲನೆ, ಮಾಡರೇಶನ್ ಮತ್ತು ಪ್ರಕಟಣೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲ ನಿಬಂಧನೆಗಳು ಜಾರಿಗೆ ಬರಲಿವೆ.

ಈ ಕುರಿತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ “ಆನ್‌ಲೈನ್ ವಿಮರ್ಶೆಗಳಿಗೆ ಮಾನದಂಡವನ್ನು ರೂಪಿಸಿದವರಲ್ಲಿ ಬಹುಶಃ ನಾವು ಮೊದಲಿಗರಾಗಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!