ಮೆಕ್ಕೆಜೋಳದ ಕಜ್ಜಾಯದ ಬಗ್ಗೆ ನಿಮಗೆ ಗೊತ್ತಾ? ಡಿಫ್ರೆಂಟ್‌ ರೆಸಿಪಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿಗಳು:

ಮೆಕ್ಕೆಜೋಳ – ಎರಡು ಕಪ್
ಅಕ್ಕಿ ಹಿಟ್ಟು – 1 ಕಪ್
ಬಾಂಬೆ ರವೆ – ½ ಕಪ್
ಬೆಲ್ಲ – 1 ಕಪ್
ಏಲಕ್ಕಿ ಪುಡಿ – ಅರ್ಧ ಚಮಚ
ಅಡಿಗೆ ಸೋಡಾ – ಚಿಟಿಕೆ
ಎಣ್ಣೆ-ಸಾಕಷ್ಟು

ಮಾಡುವ ವಿಧಾನ: 

ಒಂದು ಗಂಟೆ ನೆನೆಸಿದ ಹಸಿ ಜೋಳವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಬಾಂಬೆ ರವೆ ಮತ್ತು ಚಿಟಿಕೆ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಒಂದು ಪಾತ್ರೆಯಲ್ಲಿ ಬೆಲ್ಲ, ಕಾಲು ಕಪ್ ನೀರು ಮತ್ತು ಏಲಕ್ಕಿ ಪುಡಿ ಹಾಕಿ ಒಲೆಯ ಮೇಲಿಡಿ. ಬೆಲ್ಲ ಸಂಪೂರ್ಣವಾಗಿ ಕರಗಿ ಪಾಕ ಹದವಾಗಿ ಬಂದ ಬಳಿಕ ಕೆಳಗಿಳಿಸಿ. ಈಗ ಮಿಶ್ರಣ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟನ್ನು ತೆಗದುಕೊಂಡು ನಿಮಗೆ ಯಾವ ಆಕಾರದಲ್ಲಿ ಬೇಕೋ ಹಾಗೆ ತಟ್ಟಿ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿಯಿರಿ. ಕರೆದ ಜೋಳದ ಕಜ್ಜಾಯವನ್ನು ಬೆಲ್ಲದ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟರೆ ವೆರೈಟಿ ಕಜ್ಜಾಯ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!