ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡಿದ್ದು ಸರಿಯಲ್ಲ: ಶಾಸಕ ಯತ್ನಾಳ್

ಹೊಸದಿಗಂತ ವರದಿ,ವಿಜಯಪುರ :

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಉನ್ನತ ಅಧಿಕಾರಿಗಳನ್ನು ಮೂಲಿಗುಂಪು ಮಾಡಿ, ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಉನ್ನತ ಹುದ್ದೆ ನೀಡಿರುವುದು ಸರಿಯಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಲಿಂಗಾಯತ ಉನ್ನತ ಅಧಿಕಾರಿಗಳನ್ನು ಮೂಲೆಗುಂಪು ಮಾಡಿದ್ದಾರೆ ಎನ್ನುವ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪನವರ ಹೇಳಿಕೆ ನಿಜವಾಗಿದ್ದು, ಅದನ್ನು ನಾನು ಸ್ವಾಗತಿಸುವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿಯಲ್ಲಿಯೇ ನೋಡಿ, ಎಲ್ಲರೂ ಮುಸ್ಲಿಂ ಉನ್ನತ ಅಧಿಕಾರಿಗಳೇ ಇದ್ದಾರೆ ಎಂದರು.

ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿರುವುದು ಹಿಂದೂ ಹಾಗೂ ಲಿಂಗಾಯತ ವಿರೋಧಿ ಮನೋಭಾವವಾಗಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣ ಇದಾಗಿದೆ ಎಂದು

ಲಿಂಗಾಯತರಲ್ಲಿ ಯಾರೂ ಒಬ್ಬ ಡಿಸಿಯಿಲ್ಲ, ಎಸ್ಪಿಕೂಡಯಿಲ್ಲ, ಹೀಗೆ ಉನ್ನತ ಅಧಿಕಾರದಲ್ಲಿ ಯಾರೂ ಇಲ್ಲ. ಹೀಗೆ ಲಿಂಗಾಯತರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.

ಗಣೇಶೋತ್ಸವ ಸಂದರ್ಭ ಅಳವಡಿಸಲಾಗಿದ್ದ ತಮ್ಮ ಭಾವಚಿತ್ರಗಿಂತಲೂ ಆ ಬ್ಯಾನರನಲ್ಲಿ ಇದ್ದ ಶಿವಾಜಿ ಮಹಾರಾಜ ಹಾಗೂ ಗಣೇಶನ ಭಾವಚಿತ್ರದ ಬ್ಯಾನರ್ ಹರಿದು ಹಾಕಿದ್ದು ನೋವು ತಂದಿದೆ ಎಂದರು.
ಈದ್ ಮಿಲಾದ್ ವೇಳೆ ಶಿವಾಜಿ ಸರ್ಕಲ್‌ನಲ್ಲಿ ಅಳವಡಿಸಿದ ಬ್ಯಾನರ್ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದನ್ನು ಪೊಲೀಸ್ ಇಲಾಖೆಯವರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮುಖಂಡ ಹಮ್ಮಿದ್ ಮುಶ್ರೀಫ್ ಕೈವಾಡ ಇದೆ ಎಂದು ಪರೋಕ್ಷವಾಗಿ ಆರೋಪಿಸಿದರು. ಸತತವಾಗಿ ಎರಡು ಸಲ ಸೋಲಿನಿಂದ ಹತಾಶೆಗೊಂಡಿದ್ದೇ ಇದಕ್ಕೆ ಕಾರಣವಾಗಿದೆ. ಅಲ್ಲದೇ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮುಖಂಡರಿಗೆ ಹಣ ಹಂಚಿಕೆ ಮಾಡಿದ್ದರೂ ಸೋಲು ಕಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!