ಹೊಸದಿಗಂತ ವರದಿ, ಮುಂಡಗೋಡ:
ಶಿರಸಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಬಸ್ಸಿನ ಹಿಂಬದಿ ಟಾಯರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ತಾಲೂಕಿನ ಕಾತೂರ ಗ್ರಾಮದಲ್ಲಿ ಶನಿವಾರ ರಾತ್ರಿ ಜರುಗಿದೆ.
ಶಿರಸಿ ಕಡೆಯಿಂದ ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾತೂರ ಗ್ರಾಮದ ಸನಿಹವಿರುವಾಗ ಹಿಂಬದಿ ಟಾಯರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೂಡಲೆ ಚಾಲಕನ ಗಮನಕ್ಕೆ ಬಂದಿದೆ. ಊರು ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ನೋಡಿ ಬಸ್ ನ್ನು ನಿಲ್ಲಿಸಿದ್ದಾರೆ.
ಕಾರ್ಯ ಪ್ರವರ್ತರಾದ ಗ್ರಾಮಸ್ಥರು ಕೂಡಲೇ ಬಸ್ ನಿಲ್ಲಿಸಿ ಪ್ರಯಾಣೆಕರಿಗೆ ಕೆಳಗಿಳಿಸಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಯಾವುದೆ ಪ್ರಾಣಹಾನಿಯಾಗಿಲ್ಲ ಸಾರ್ವಜನಿಕರ ಕಾಳಜಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಆಗುವ ಅವಘಡ ತಪ್ಪಿಸಿದಂತಾಗಿದೆ.