Thursday, February 2, 2023

Latest Posts

ಬಂಗಾಳಕ್ಕೂ ಲಗ್ಗೆಯಿಟ್ಟ ಕೊರೋನಾ BF.7 ವೈರಸ್: ವಿದೇಶಿ ಮಹಿಳೆ ಸೇರಿ ಇಬ್ಬರಿಗೆ ಪಾಸಿಟಿವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕೊತಾದಲ್ಲೂ ಒಬ್ಬ ವಿದೇಶಿ ಮಹಿಳೆ ಸೇರಿ ಇಬ್ಬರಿಗೆ ಸೋಂಕು (BF.7 Variant) ತಗುಲಿದೆ. ಬ್ರಿಟನ್‌ ಪಾಸ್‌ಪೋರ್ಟ್‌ ಹೊಂದಿರುವ ಮಹಿಳೆಯು ಕೌಲಾಲಂಪುರದಿಂದ ಕೋಲ್ಕೊತಾಗೆ ಆಗಮಿಸಿದ್ದಾರೆ.ಮತ್ತೊಬ್ಬ ವ್ಯಕ್ತಿಯು ದುಬೈನಿಂದ ಕೋಲ್ಕೊತಾಗೆ ಆಗಮಿಸಿದ್ದಾರೆ.
ಇಬ್ಬರ ಮಾದರಿಯನ್ನೂ ಜೆನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಹಾಗೆಯೇ, ಬ್ರಿಟಿಷ್‌ ಮಹಿಳೆಯನ್ನು ಬೆಲಿಯಾಘಟ ಆಸ್ಪತ್ರೆಯ ಐಸೊಲೇಷನ್‌ನಲ್ಲಿ ವಾರ್ಡ್‌ನಲ್ಲಿ ಇರಿಸಲಾಗಿದೆ. ಇವರಿಗೆ ಆರ್‌ಟಿ-ಪಿಸಿಆರ್‌ ತಪಾಸಣೆಯನ್ನೂ ಮಾಡಲಾಗಿದೆ.
ಗಯಾ ಪಟ್ಟಣದಲ್ಲಿರುವ ನಾಲ್ವರು ವಿದೇಶಿಯರಿಗೂ ಕೊರೊನಾ ದೃಢಪಟ್ಟಿದೆ. ಅವರ ಮಾದರಿಗಳನ್ನೂ ಜೆನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!