ಕೊರೋನಾ ಎಲ್ಲರಿಗೂ ಒಂದೇ ಪಕ್ಷಾಧಾರಿತವಾಗಿ ಬರಲ್ಲ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ನಾಗಮಂಗಲ:

ಕೊರೋನಾ ಎಲ್ಲರಿಗೂ ಒಂದೇ. ಅದೇನು ಪಕ್ಷಾಧಾರಿತವಾಗಿ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ತಾಲೂಕಿನ ಆದಿ ಚುಂಚನಗಿರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಹೆಚ್ಚಾಗುತ್ತಿರುವುದನ್ನು ನಿತ್ಯ ನೋಡುತ್ತಿದ್ದೇವೆ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ವಿರೋಧಪಕ್ಷಕ್ಕೂ ತನ್ನದೇ ಆದ ಕರ್ತವ್ಯವಿದೆ. ಒಂದು ಜವಾಬ್ದಾರಿಯುತ ವಿರೋಧಪಕ್ಷವಾಗಿ ನಡೆದುಕೊಳ್ಳಬೇಕೆನ್ನುವುದು ನನ್ನ ಅಪೇಕ್ಷೆಯಾಗಿದೆ ಎಂದು ಹೇಳಿದರು.
ಹಿಂದಿನ ಎರಡು ಅಲೆಯ ಅನುಭವದಿಂದ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ. ಆ ನಿಟ್ಟಿನಲ್ಲಿ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕೊರೋನಾಗಾಗಿಯೇ ಒಂದು ಕಾನೂನು ಇದೆ. ಅದರನ್ವಯ ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದ ಬೊಮ್ಮಾಯಿ, ಇದನ್ನು ಮೀರಿ ವಿಪಕ್ಷಗಳು ನಾವು ನಡೆದುಕೊಳ್ಳುವುದೇ ಹೀಗೆ ಎಂದರೆ ಜನರು ಅದನ್ನು ಗಮನಿಸುತ್ತಾರೆ ಎಂದರು.
ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದಮೊದಲು ಕಾನಕೊರೋನಾ ನಿಯಂತ್ರಣ ಆಗಬೇಕು. ಆನಂತರ ಕುಳಿತು ವಿಚಾರಗಳಬಗ್ಗೆ ಮಾತನಾಡಬಹುದು. ಎಲ್ಲರಿಗೂ ತನ್ನದೇ ಆದ ಜವಾಬ್ದಾರಿಗಳಿವೆ. ವಿಶೇಷವಾಗಿ ರಾಜಕೀಯ ಪಕ್ಷಗಳಿಗಿದೆ. ಹಿಂದೆ ಅವರೂ ಸಹ ಸರ್ಕಾರ ನಡೆಸಿದ್ದಾರೆ. ಅವರೂ ಕಾನೂನುಗಳನ್ನು ತಂದಿದ್ದಾರೆ. ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆನ್ನುವುದು ನನ್ನ ಅಪೇಕ್ಷೆ. ಕಾನೂನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಸೂಕ್ತ ಸಮಯದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಕೊರೋನಾಗೆ ಯಾರಾದರೂ ಷಡ್ಯಂತ್ರ ನಡೆಸಲು ಸಾಧ್ಯವೇ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಹೆಚ್ಚಾಗುತ್ತಿಲ್ಲ. ಎಲ್ಲಾ ರಾಜ್ಯದಲ್ಲೂ ಕೊರೋನಾ ಹೆಚ್ಚಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!