ಹೊಸದಿಗಂತ ವರದಿ,ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು ಬುಧವಾರ 19 ಜನರಲ್ಲಿ ಸೋಂಕು ದೃಡಪಟ್ಟಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 48 ಕ್ಕೆ ತಲುಪಿದೆ.
ಬುಧವಾರ ಭಟ್ಕಳದಲ್ಲಿ 8, ಕಾರವಾರ 7, ಸಿದ್ಧಾಪುರ, ಯಲ್ಲಾಪುರ, ಕುಮಟಾ, ಮುಂಡಗೋಡಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.
ಸೋಂಕು ದೃಡಪಟ್ಟವರಲ್ಲಿ
ಗೋವಾ ಪ್ರವಾಸದಿಂದ ಮರಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾಗಿದೆ.