ತಮಿಳುನಾಡಿನಲ್ಲಿ ಕೊರೋನಾ ಹೆಚ್ಚಳ: ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ, ಸನ್ ಡೇ ಲಾಕ್​ಡೌನ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡಿನಲ್ಲಿ ಕೊರೋನಾ ಹೆಚ್ಚುತ್ತಿರವ ಹಿನ್ನೆಲೆ ನಾಳೆಯಿಂದ ನೈಟ್​ ಕರ್ಫ್ಯೂ ಜಾರಿಯಾಗಲಿದ್ದು, ಇದರ ಜೊತೆಗೆ ಭಾನುವಾರದಂದು ಲಾಕ್​ಡೌನ್​ ಹೇರಿಕೆ ಮಾಡುವುದಾಗಿ ಸಿಎಂ ಸ್ಟಾಲಿನ್​ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ನಾಳೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿಯಾಗಲಿದೆ. ಭಾನುವಾರದಂದು ಲಾಕ್​ಡೌನ್​​ ಹೇರಿಕೆ ಮಾಡಲಾಗುವುದು ಎಂದಿದ್ದಾರೆ.
ಜನವರಿ 9ರಂದು ರೆಸ್ಟೋರೆಂಟ್​​ಗಳು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. 1-9ನೇ ತರಗತಿವರೆಗೆ ಆನ್​ಲೈನ್​ ತರಗತಿಗ, 10ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ-ಕಾಲೇಜ್​​ಗಳಿಗೆ ತೆರಳಲು ಅವಕಾಶ ನೀಡಲಾಗಿದೆ.
ಇನ್ನು ತಮಿಳುನಾಡಿನ ಪ್ರಸಿದ್ಧ ಹಬ್ಬ ಪೊಂಗಲ್‌ಗೆ , ಸರ್ಕಾರಿ, ಖಾಸಗಿ ಸಮಾರಂಭಗಳನ್ನು ಮುಂದೂಡಲಾಗಿದೆ.
ಬಸ್​, ಉಪನಗರ ರೈಲುಗಳು ಹಾಗೂ ಮೆಟ್ರೋಗಳಲ್ಲಿ ಶೇ. 50ರ ಆಸನದೊಂದಿಗೆ ಕಾರ್ಯನಿರ್ವಹಿಸಲಿವೆ.
ಶುಕ್ರವಾರ, ಶನಿವಾರ ಮತ್ತು ಭಾನುವಾರ ಧಾರ್ಮಿಕ ಸ್ಥಳಗಳಲ್ಲಿ ಭಕ್ತರಿಗೆ ಅನುಮತಿ ಇರುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!