Sunday, October 1, 2023

Latest Posts

2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕೊರೋನಾ: ನಟಿ ಮೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುಭಾಷಾ ಖ್ಯಾತ ನಟಿ ಮೀನಾ ಹಾಗೂ ಕುಟುಂಬದ ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಅವರು, 2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕೊರೋನಾ. ಇದಕ್ಕೆ ನಮ್ಮ ಇಡೀ ಕುಟುಂಬ ಇಷ್ಟವಾಗಿದೆ. ಆದರೆ ಅದನ್ನು ನಮ್ಮ ಮನೆಯಲ್ಲಿರಲು ಬಿಡುವುದಿಲ್ಲ. ನೀವೆಲ್ಲರೂ ಜಾಗರೂಕರಾಗಿರಿ, ಜವಾಬ್ದಾರಿಯಿಂದ ವರ್ತಿಸಿ. ಕೋವಿಡ್‌ ಹರಡಬೇಡಿ’ ಎಂದು ಮನವಿ ಮಾಡಿದ್ದಾರೆ.
ತೆಲುಗು, ತಮಿಳು ಹಾಗೂ ಮಲಯಾಳಂ ಮಾತ್ರವಲ್ಲದೆ ಕನ್ನಡ ಸಿನಿಮಾಗಳಲ್ಲೂ ಮೀನಾ ನಟಿಸಿದ್ದಾರೆ. ಮೊಮ್ಮಗ, ಪುಟ್ನಂಜ, ನಾಗರ ಮಹಿಮೆ,ಈ ಮೂಲಕ ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!