2ನೇ ಇನ್ನಿಂಗ್ಸ್​​ನಲ್ಲಿ 266 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್: ​ ಗೆಲುವಿಗೆ 240 ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 266 ರನ್​ಗಳಿಗೆ ಆಲೌಟ್​ ಆಗಿದೆ. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 240 ರನ್​ಗಳ ಟಾರ್ಗೆಟ್​​ ನೀಡಿದೆ.
ನಿನ್ನೆ 85 ರನ್ ​ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಬ್ಯಾಟಿಂಗ್ ಮುಂದುವರೆಸಿತು. 35 ರನ್​ಗಳಿಕೆ ಮಾಡಿದ್ದ ಪೂಜಾರಾ ಹಾಗೂ 11 ರನ್ ​ಗಳಿಕೆ ಮಾಡಿದ್ದ ರಹಾನೆ ಇಂದು ಬ್ಯಾಟಿಂಗ್ ಮುಂದುವರೆಸಿದರು.
53 ರನ್​ಗಳಿಕೆ ಮಾಡಿ ಬ್ಯಾಟ್​ ಮಾಡ್ತಿದ್ದ ವೇಳೆ ಚೇತೇಶ್ವರ್ ಪೂಜಾರಾ ವೇಗಿ ರಬಾಡಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರೆ, 58 ರನ್​ಗಳಿಕೆ ಮಾಡಿದ್ದ ರಹಾನೆ ಕೂಡ ಅದೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಆ ಬಳಿಕ ವಿಕೆಟ್ ಕೀಪರ್​ ರಿಷಭ್ ಪಂತ್ ಕೂಡ ರಬಾಡಾ ಓವರ್​​ನಲ್ಲೇ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. 16 ರನ್​ ಗಳಿಸಿ ಬ್ಯಾಟ್​ ಮಾಡ್ತಿದ್ದ ಅಶ್ವಿನ್​ ವಿಕೆಟ್ ಪಡೆದುಕೊಳ್ಳುವಲ್ಲಿ ಲುಂಗಿ ಎಗ್ಡಿ ಯಶಸ್ವಿಯಾದರು.
ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಹಾಗೂ ಶಾರ್ದೂಲ್ ಠಾಕೂರ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಹನುಮ ವಿಹಾರಿ ಅಜೇಯ 40 ರನ್​ಗಳಿಕೆ ಮಾಡಿದ್ರೆ, ಶಾರ್ದೂಲ್ ಠಾಕೂರ್​ 28 ರನ್​ಗಳಿಸಿದರು. ಬುಮ್ರಾ 7ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.
ಇದೀಗ 240 ರನ್​ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ಟೀ ವಿರಾಮದ ವೇಳೆಗೆ ವಿಕೆಟ್​ ನಷ್ಟವಿಲ್ಲದೇ 34 ರನ್​ಗಳಿಕೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!