ನಟಿ ಕೀರ್ತಿ ಸುರೇಶ್​ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್​ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವಿಟರ್​ನಲ್ಲಿ ಅವರು ಮಾಹಿತಿ ಹಂಚಿಕೊಂಡ ಅವರು, ‘ನನಗೆ ಕೊವಿಡ್ ಕಾಣಿಸಿಕೊಂಡಿದ್ದು, ಸೌಮ್ಯ ಲಕ್ಷಣಗಳಿವೆ’ ಎಂದಿದ್ದಾರೆ.
ತಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡ ಸೋಂಕು ತಗುಲಿದೆ. ಎಲ್ಲಾ ಅಭಿಮಾನಿಗಳಿಗೆ ಸೋಂಕನ್ನು ನಿರ್ಲಕ್ಷಿಸದಂತೆ ಕೀರ್ತಿ ಕರೆ ನೀಡಿದ್ದಾರೆ.
ಎಲ್ಲರೂ ಮುನ್ನೆಚ್ಚರಿಕೆಗಳನ್ನು ಪಾಲಿಸಿ. ಒಂದು ವೇಳೆ ಇನ್ನೂ ಲಸಿಕೆ ಪಡೆದಿಲ್ಲ ಎಂದರೆ, ಆದಷ್ಟು ಶೀಘ್ರವಾಗಿ ಪಡೆದುಕೊಳ್ಳಿ. ಇದರಿಂದ ಸೋಂಕಿನ ಪರಿಣಾಮ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ತೀವ್ರತರ ಸೋಂಕಿನಿಂದ ಪಾರಾಗಬಹುದು ಎಂದು ನಟಿ ತಿಳಿಸಿದ್ದಾರೆ.
ಇದೇ ವೇಳೆ ತಾನು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕೀರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!