ಕೊರೊನಾ ವರದಿ | ದೇಶದಲ್ಲಿಂದು 16,935 ಕೇಸ್‌ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಇಳಿಮುಖವಾಗಿದ್ದು ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 16,935 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 1,44,264 ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು ದೈನಂದಿನ ಪಾಸಿವಿಟಿ ದರವು 6.48% ದಷ್ಟಿದೆ ಹಾಗೂ ವಾರದ ಪಾಸಿಟಿವಿಟಿ ದರವು 4.58% ದಷ್ಟಿದೆ.

ಒಟ್ಟೂ 16,069 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾದರವು 98.47% ದಷ್ಟಿದೆ. ಇಲ್ಲಿಯವರೆಗೂ ಒಟ್ಟೂ 4,30,97,510 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.

ದೇಶದಾದ್ಯಂತ 92.61ಕೋಟಿ ಎರಡನೇ ಡೋಸ್‌ ಹಾಗೂ 5.67ಕೋಟಿ ಮುನ್ನೆಚ್ಚರಿಕಾ ಡೋಸ್‌ ಸೇರಿದಂತೆ ಒಟ್ಟೂ 200ಕೋಟಿಗೂ ಅಧಿಕ ಕೊವಿಡ್‌ ಲಸಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!