Friday, February 23, 2024

ಕೊರೋನಾ ಮಣಿಸಿ ಬದುಕುಳಿದೆ, ಇದಕ್ಕೆ ಅಯ್ಯಪ್ಪನೇ ಕಾರಣ ಎಂದು ವಜ್ರದ ಕಿರೀಟ ಅರ್ಪಿಸಿದ ಉದ್ಯಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯ್ಯಪ್ಪನ ಆಶೀರ್ವಾದದಿಂದ ನಾನು ಮತ್ತೆ ಬದುಕುಳಿದೆ ಎಂದು ಭಕ್ತನೊಬ್ಬ ಅಯ್ಯಪ್ಪ ದೇವರಿಗೆ ವಜ್ರದ ಕಿರೀಟ ಅರ್ಪಿಸಿದ್ದಾನೆ.
ಕರ್ನೂಲ್‌ನ ಉದ್ಯಮಿ ವೆಂಕಟಸುಬ್ಬಯ್ಯಗೆ ಕೊರೋನಾ ಸೋಂಕು ತಗುಲಿತ್ತು. ಅವರು 15 ದಿನಗಳ ಕಾಲ ಐಸಿಯುನಲ್ಲಿದ್ದರು. ನಾನು ಬದುಕಿ ವಾಪಾಸ್ ಬಂದಿದ್ದಕ್ಕೆ ಅಯ್ಯಪ್ಪನೇ ಕಾರಣ ಎಂದು ವಜ್ರದ ಕಿರೀಟ ಅರ್ಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವಾಗ ಬದುಕುಳಿದರೆ ವಜ್ರದ ಕಿರೀಟ ನೀಡುವುದಾಗಿ ಹರಕೆ ಹೊತ್ತಿದ್ದರು.
ಕಳೆದ 30 ವರ್ಷಗಳಿಂದಲೂ ತಪ್ಪದೇ ಶಬರಿಮಲೆಗೆ ಭೇಟಿ ನೀಡುತ್ತಿರುವ ವೆಂಕಟಸುಬ್ಬಯ್ಯ ಅಯ್ಯಪ್ಪನ ಪರಮ ಭಕ್ತರಾಗಿದ್ದಾರೆ.
ಪ್ರಧಾನ ಅರ್ಚಕರಿಗೆ ವಜ್ರದ ಕಿರೀಟ ಹಸ್ತಾಂತರಿಸಿದ್ದು, ದೇವರಿಗೆ ಅರ್ಪಣೆ ಮಾಡುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!