August 31, 2026
Monday, August 31, 2026
spot_img

ಕಿಚ್ಚನ ಎಂಟ್ರಿಗೆ ಕೌಂಟ್‌ಡೌನ್‌: ಕಾಮನ್‌ ಮ್ಯಾನ್‌ ಎಂಟ್ರಿಯೊಂದಿಗೆ ಗ್ರ್ಯಾಂಡ್‌ ಆಗಿ ಬರುತ್ತಿದೆ ಬಿಗ್‌ಬಾಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್‌ ಅಭಿನಯದ ಹೊಸ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ. ಕೆಲವೇ ನಿಮಿಷಗಳಲ್ಲಿ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಹೊಸ ಸೀಸನ್‌ಗೆ ಕೌಂಟ್‌ಡೌನ್‌ ಆರಂಭವಾಗಿದೆ.

ಕಿಚ್ಚ ಡೈಲಾಗ್‌ಗೆ ಅಭಿಮಾನಿಗಳ ಫಿದಾ

ಪ್ರೋಮೋದಲ್ಲಿ ಸ್ಟೈಲಿಷ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್‌, ‘ಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ… ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ?ʼ ಎನ್ನುವ ಡೈಲಾಗ್‌’ ಮೂಲಕ ಹೊಸ ಸೀಸನ್‌ಗೆ ಸ್ವಾಗತ ಕೋರಿದ್ದಾರೆ. ಈ ಡೈಲಾಗ್‌ ಅಭಿಮಾನಿಗಳ ಗಮನ ಸೆಳೆದಿದೆ.

ಕಾಮನ್‌ ಮ್ಯಾನ್‌ಗೆ ವಿಶೇಷ ಅವಕಾಶ

ಈ ಬಾರಿಯ ಸೀಸನ್‌ನ ಪ್ರಮುಖ ಆಕರ್ಷಣೆಯಾಗಿ ಸಾಮಾನ್ಯ ಜನರಿಗೂ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಅವಕಾಶ ನೀಡಲಾಗಿದೆ. ಆಡಿಷನ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಯಾದ ಸ್ಪರ್ಧಿಗಳ ಹೆಸರು ಗ್ರ್ಯಾಂಡ್‌ ಪ್ರೀಮಿಯರ್‌ನಲ್ಲಿ ಬಹಿರಂಗವಾಗಲಿದೆ.

ಹೊಸ ಸ್ಪರ್ಧಿಗಳು, ಹೊಸ ಮನರಂಜನೆ

ಸೆಪ್ಟೆಂಬರ್‌ 5ರಿಂದ ಆರಂಭವಾಗಲಿರುವ ಶೋನಲ್ಲಿ ಹೊಸ ಸೆಲೆಬ್ರಿಟಿಗಳು, ವಿಭಿನ್ನ ಟಾಸ್ಕ್‌ಗಳು ಹಾಗೂ ಅನಿರೀಕ್ಷಿತ ತಿರುವುಗಳು ಇರಲಿವೆ. ಪ್ರೋಮೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸೀಸನ್‌ ಕುರಿತು ಚರ್ಚೆ ಜೋರಾಗಿದ್ದು, ಅಭಿಮಾನಿಗಳು ಪ್ರೀಮಿಯರ್‌ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !