ನವದಂಪತಿ ಆಕರ್ಷಕ ನೃತ್ಯಕ್ಕೆ ಜನ ಫುಲ್‌ ಫಿದಾ..!ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆಯಲ್ಲಿ ನೃತ್ಯ ಮಾಡುವುದು ಇತ್ತೀಚೆಗೆ ಸರ್ವೆ ಸಮಾನ್ಯ. ನವಜೋಡಿ, ನೆಂಟರಿಷ್ಟರೆಲ್ಲ ಸೇರಿ ʻಸಂಗೀತ್‌ʼ ಎಂಬ ಹೊಸ ಕಾನ್ಸಪ್ಟ್‌ನಲ್ಲಿ ಹೆಜ್ಜೆ ಹಾಕುತ್ತಾರೆ. ಇದೀಗ ವೈರಲ್‌ ಆಗಿರುವ ವಿಡಿಯೋದಲ್ಲಿ ನವದಂಪತಿ ಹೆಜ್ಜೆ ಹಾಕಿರುವ ನೃತ್ಯಕ್ಕೆ ಎಲ್ಲರೂ ಫುಲ್‌ ಫಿದಾ ಆಗಿದ್ದಾರೆ. ಛತ್ತೀಸ್‌ಗಢದ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಮೇಡ್‌ ಫಾರ್‌ ಈಚ್‌ ಅದರ್‌ ಎಂದು ಮದುವೆ ಶುಭಾಷಯ ಕೋರಿದ್ದಾರೆ. 1994ರ ಹಿಂದಿ ಚಲನಚಿತ್ರ ಖುದ್ದಾರ್‌ನ ತುಮ್ಸಾ ಕೊಯಿ ಪ್ಯಾರಾ ಹಾಡಿಗೆ ದಂಪತಿ ನೃತ್ಯ ಮಾಡಿರುವುದು ಕಂಡುಬಂದಿದೆ.

ಈ ನವ ಜೋಡಿಯ ನೃತ್ಯ ಅದ್ಭುತ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ, ಮೇಡ್ ಫಾರ್ ಈಚ್ ಅದರ್ ಎಂದು ಕೊಂಡಾಡುತ್ತಿದ್ದಾರೆ. ಇದುವರೆಗೆ ಈ ವಿಡಿಯೋ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ ಎಂದರೆ ಎಷ್ಟು ಮಂದಿ ಇಷ್ಟಪಟ್ಟಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!