Tuesday, August 16, 2022

Latest Posts

ನೇಮಕಾತಿ ವಿಳಂಬ ಖಂಡಿಸಿ ಬೆಳಗಾವಿಯಲ್ಲಿ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ಪೌರಕಾರ್ಮಿಕ ವಿಶೇಷ ನೇಮಕಾತಿ ವಿಳಂಬ ಖಂಡಿಸಿ ಕರ್ನಾಟಕ ರಾಜಕೀಯ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ ಜಿಲ್ಲೆಯ 34 ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸೋಮವಾರದಿಂದ ಅನಿರ್ದಿಷ್ಟವಧಿ ಮುಷ್ಕರ ಕೈಗೊಂಡಿದ್ದಾರೆ.
ಜಿಲ್ಲೆಯ ಎರಡು ನಗರಸಭೆ, 16 ಪುರಸಭೆ ಹಾಗೂ 16 ಪಟ್ಟಣ ಪಂಚಾಯತಗಳ ಸಿಬ್ಬಂದಿ ತಮ್ಮ ದಿನನಿತ್ಯದ ಕಾರ್ಯವನ್ನು ಬದಿಗೊತ್ತಿ ಮುಷ್ಕರ ನಡೆಸುತ್ತಿದ್ದಾರೆ.
ನಿಪ್ಪಾಣಿ, ಗೋಕಾಕ ನಗರಸಭೆ, ಚಿಕ್ಕೋಡಿ, ಬೈಲಹೊಂಗಲ, ಹುಕ್ಕೇರಿ, ಸದಲಗಾ, ಅಥಣಿ ಪುರಸಭೆ ಸೇರಿದಂತೆ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಪೌರ ಸಿಬ್ಬಂದಿ ಮುಷ್ಕರದಲ್ಲಿ ನಿರತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss