ಪನೀರ್‌ಸೆಲ್ವಂ ಮೇಲೆ ಪಕ್ಷವಿರೋಧಿ ಕಾರ್ಯದ ಆರೋಪ: ಪಳನಿ ಸ್ವಾಮಿಗೆ ಮಣೆ ಹಾಕಿದ ಎಐಎಡಿಎಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದು ನಡೆದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷದ ನಿರ್ಣಾಯಕ ಜನರಲ್ ಕೌನ್ಸಿಲ್ ಸಭೆಯು ಉಭಯ ನಾಯಕತ್ವ ರಚನೆಯನ್ನು ರದ್ದುಗೊಳಿಸಿದೆ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ. ಇದರಿಂದ ಓ ಪನ್ನರ್‌ಸೆಲ್ವಂಗೆ ಮತ್ತಷ್ಟು ಹಿನ್ನಡೆಯಾಗಿದ್ದು ಅವರು ಪಕ್ಷದಲ್ಲಿ ಮಾನ್ಯತೆಯನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಪಕ್ಷದ ಸಾಮಾನ್ಯ ಮಂಡಳಿ ಸಭೆಗೆ ತಡೆ ನೀಡುವಂತೆ ಓ ಪನ್ನೀರಸೆಲ್ವಂ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ರಾಜಕೀಯ ಪಕ್ಷವೊಂದರ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದರು. ತೀರ್ಪಿನ ಬೆನ್ನಲ್ಲೇ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು ಎಐಎಡಿಎಂಕೆ ಪಕ್ಷದಲ್ಲಿನ ದ್ವಂದ್ವ ನಾಯಕತ್ವ ನೀತಿಯನ್ನು ಕೊನೆಗೊಳಿಸಿ ಓ ಪನ್ನೀರಸೆಲ್ವಂ ಅವರನ್ನು ಪಕ್ಷ ವಿರೋಧಿ ಕಾರ್ಯದ ಆರೋಪದ ಮೇಲೆ ಹಿಂದೆ ಸರಿಸಲಾಗಿದೆ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.

ಇದರ ವಿರುದ್ಧ ಎಡಪ್ಪಾಡಿ ಕೆ ಪಳನಿಸ್ವಾಮಿ ಹಾಗೂ ಓ ಪನ್ನೀರಸೆಲ್ವಂ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದುಎಐಎಡಿಎಂಕೆ ಪಕ್ಷದ ಕಚೇರಿಯ ಹೊರಗೆ ಇಪಿಎಸ್ ಮತ್ತು ಒಪಿಎಸ್ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿವೆ. ಘರ್ಷಣೆಯಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಇದೇ ವೇಳೆ ಕೆಲವರು ಪಕ್ಷದ ಕಛೇರಿಯ ಬಾಗಿಲು ಮುರಿದು ಬಲವಂತವಾಗಿ ಒಳಗೆ ನುಗ್ಗಿದ್ದು ಕಂಡುಬಂದಿದೆ ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಇ ಪಳನಿಸ್ವಾಮಿ ಅವರು ಓ ಪನೀರ್ಸೆಲ್ವಂ ಅವರನ್ನು ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದ್ದಾರೆ. ಆರ್ ವೈತಿಲಿಂಗಂ, ಮನೋಜ್ ಪಾಂಡಿಯನ್ ಮತ್ತು ಜೆಸಿಡಿ ಪ್ರಭಾಕರನ್ ಅವರನ್ನೂ ಉಚ್ಚಾಟಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!