ಲಗೇಜ್ ವಿಳಂಬ: ವಿಮಾನಯಾನದ ವಿರುದ್ಧ ದೂರು ದಾಖಲಿಸಿ 25 ಸಾವಿರ ಪರಿಹಾರ ಪಡೆದ ದಂಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಗೇಜ್ ವಿಳಂಬವಾದ ಹಿನ್ನೆಲೆ ಇಂಡಿಗೋ ಏರ್‌ಲೈನ್ಸ್ ವಿರುದ್ಧ ಬೆಂಗಳೂರು ದಂಪತಿ ಮೊಕದ್ದಮೆ ಹೂಡಿ 25,000 ರೂಪಾಯಿ ಪರಿಹಾರ ಪಡೆದಿದ್ದಾರೆ.

ದಂಪತಿ ರಾಜಸ್ಥಾನದ ಉದಯಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಉದಯಪುರ ತಲುಪಿದರೂ ಇವರ ಲಗೇಜ್ ಇನ್ನೂ ತಲುಪಿರಲಿಲ್ಲ, ಇದರಿಂದ ದಂಪತಿ ತೊಂದರೆ ಅನುಭವಿಸಿದ್ದರು. ಮತ್ತೆ ಹೊಸತಾಗಿ ಬಟ್ಟೆಗಳು, ಟಾಯ್ಲೆಟರೀಸ್ ಖರೀದಿಸಬೇಕಾಗಿತ್ತು. ಸೇವೆಯ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ದಂಪತಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯದ ವೆಚ್ಚ ಐದು ಸಾವಿರ ರೂಪಾಯಿ ಹೊರತುಪಡಿಸಿ 20,000 ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಏರ್‌ಲೈನ್ಸ್‌ಗೆ ಸೂಚಿಸಿದೆ. ಸಿವಿ ರಾಮನ್ ನಗರ ನಿವಾಸಿಗಳಾದ ಥೋಮಸ್ ವೆಲ್ಲಪಲ್ಲಿ ಹಾಗೂ ಪತ್ನಿ ಸುನೀತಾ ವೆಲ್ಲಪಲ್ಲಿ ಬೆಂಗಳೂರಿನಿಂದ ಉದಯ್‌ಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಉದಯ್‌ಪುರಕ್ಕೆ ಬಂದಿಳಿದರೂ ಲಗೇಜ್ ಇನ್ನೂ ಬಂದಿಲ್ಲ ಎಂದು ತಿಳಿದದ್ದೇ ದೂರು ದಾಖಲಿಸಿದ್ದರು. ಮರುದಿನವೂ ಕೂಡ ಲಗೇಜ್ ಬರಲಿಲ್ಲ. ಇದರಿಂದಾಗಿ 1.3 ಲಕ್ಷದಷ್ಟು ಹೊಸ ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳನ್ನು ಅವರು ಖರೀದಿಸಿದರು.

ಮತ್ತೆ ಬೆಂಗಳೂರಿಗೆ ವಾಪಾಸಾಗುವ ಸಂದರ್ಭ ವಿಮಾನದ ಸಿಬ್ಬಂದಿ ಲಗೇಜ್ ವಾಪಾಸ್ ನೀಡಿದ್ದಾರೆ. ಕ್ಷಮೆಯಾಚಿಸಿ ಫ್ರೀ ಟ್ರಾವೆಲ್ ವೋಚರ್ ನೀಡುವುದಾಗಿ ಹೇಳಿದ್ದಾರೆ. ಇದನ್ನು ನಿರಾಕರಿಸಿದ ದಂಪತಿ ದೂರು ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!