ಹೊಸದಿಗಂತ ವರದಿ, ಕಲಬುರಗಿ :
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯರ ಶಿವಲಿಂಗಕ್ಕೆ ಫೆ.26 ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು 15 ಜನ ಹಿಂದು ಮುಖಂಡರಿಗೆ ಅನುಮತಿ ನೀಡಿ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೊರತು ಪಡಿಸಿ,15 ಜನ ಹಿಂದು ಮುಖಂಡರಿಗೆ ಮಾತ್ರ ಪೂಜೆಗೆ ಅನುಮತಿ ನೀಡಿದ್ದು, ಅರ್ಜಿದಾರ ಸಿದ್ರಾಮಯ್ಯ ಹಿರೇಮಠ, ಕಡಗಂಚಿ ಶ್ರೀಗಳು, ಹರ್ಷಾನಂದ ಗುತ್ತೇದಾರ್ ಸೇರಿದಂತೆ 15 ಜನ ಹಿಂದು ಮುಖಂಡರಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ಪೂಜೆ ಸಲ್ಲಿಸಲು ಕಲಬುರಗಿ ವಿಭಾಗೀಯ ಪೀಠ ಆದೇಶಿಸಿದೆ.ಜೊತೆಗೆ ಪೂಜೆಗೆ ತೆರಳುವ ಹದಿನೈದು ಜನರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಸಹ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಪೂಜೆಗೆ ತೆರಳುವ ಹಿಂದೂ ಮುಖಂಡರು
೧) ಶ್ರೀ ವೀರಭದ್ರ ಶಿವಾಚಾರ್ಯರು ಕಡಗಂಚಿ ಮಠ, ಕಲಬುರಗಿ.
೨) ಪಂಪಾಪತಿ ದೇವರು ಕಡಗಂಚಿ ಮಠ.
೩) ಪ್ರಕಾಶ್ ಜೋಶಿ.
೪) ಆಳಂದ ಯುವ ಮುಖಂಡ ಹರ್ಷಾನಂದ ಗುತ್ತೇದಾರ್.
೫) ಮಲ್ಲಿಕಾರ್ಜುನ ಕಂದಗೂಳೆ.
೬) ಮಲ್ಲಿಕಾರ್ಜುನ ಸಾವಳಗಿ.
೭) ಅಡವಿರಾಜ ಅತನೂರೆ.
೮) ನಾಗನಾಥ ಏಟೆ.
೯) ಸುನೀಲ್ ಹಿರೋಳ್ಳಿಕರ್.
೧೦) ಸಂಜಯ್ ಮಿಸಕಿನ್
೧೧) ಮಹಾಂತೇಶ ಪಾಟೀಲ.
೧೨) ಸಿದ್ದರಾಮಯ್ಯ ಹಿರೇಮಠ ಸೇರಿದಂತೆ ೧೫ ಜನ ಹಿಂದು ಮುಖಂಡರು ಪೂಜೆ ಸಲ್ಲಿಸಲು ತೆರಳುವವರಿದ್ದಾರೆ.