ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯ ಭಾವಚಿತ್ರ ಹರಿದ ಕಾಂಗ್ರೆಸ್ ಶಾಸಕನಿಗೆ ನ್ಯಾಯಾಲಯ ದಂಡ ವಿಧಿಸಿದೆ!
ಹೌದು, 2017 ರಲ್ಲಿ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಪ್ರಧಾನಿ ಮೋದಿಯ ಭಾವಚಿತ್ರ ಹರಿದಿದ್ದು, ಗುಜರಾತ್ ನವಸಾರಿ ನ್ಯಾಯಾಲಯವು 99 ರೂಪಾಯಿ ದಂಡ ವಿಧಿಸಿದೆ.
ಅನಂತ್ ಪಟೇಲ್ ಮತ್ತು ಇತರರು ನವಸಾರಿ ಕೃಷಿ ವಿಶ್ವವಿದ್ಯಾಲುದ ಕುಲಪತಿ ಕಚೇರಿಗೆ ನುಗ್ಗಿ ಅಶಿಸ್ತು ತೋರಿದ್ದರು. ಜತೆಗೆ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ವಿಸಿ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯ ಫೋಟೊ ಹರಿದು ಹಾಕಿದ್ದರು ಎನ್ನುವ ಆರೋಪವಿದೆ.
ಕ್ರಮಿನಲ್ ಅತಿಕ್ರಮಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಲಯ 99 ರೂಪಾಯಿ ದಂಡ ಪಾವತಿಸಲು ವಿಫಲವಾದರೆ ಏಳು ದಿನಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದೆ.