ಕೋವಿಡ್‌ ವರದಿ: 13,734 ಹೊಸ ಪ್ರಕರಣ ಪತ್ತೆ, 34 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದ್ದು ಒಟ್ಟೂ 13,734 ಹೊಸ ಕೋವಿಡ್‌ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೋವಿಡ್ ಸೋಂಕಿನ ಸಂಖ್ಯೆಯು 4,40,50,009 ಕ್ಕೆ ತಲುಪಿದೆ ಮತ್ತು 34 ಕೋವಿಡ್-ಸಂಬಂಧಿತ ಸಾವುಗಳನ್ನು ವರದಿಯಾಗಿದೆ

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 1,39,792 ರಷ್ಟಿದ್ದು ದೈನಂದಿನ ಪಾಸಿಟಿವಿಟಿ ದರವು 3.34%ದಷ್ಟಿದೆ ಮತ್ತು ವಾರಾಂತ್ಯದ ಪಾಸಿಟಿವಿಟಿ ದರವು 4.79% ದಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 17,897 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಚೇತರಿಕಾದರವು 98.49% ದಷ್ಟಿದೆ.

ಒಟ್ಟೂ 204.6 ಕೋಟಿ ಗೂ ಅಧಿಕ ಲಸಿಕೆ ವಿತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!