ಇಂದು ಮೋದಿ-ಸೋಲೀಹ್‌ ಭೇಟಿ: ನ್ಯಾಯಾಂಗದ ಡಿಜಿಟಲೀಕರಣ, ಐಟಿ ಕ್ಷೇತ್ರಗಳ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಭೇಟಿ ಮಾಡಲಿದ್ದಾರೆ. ಉಭಯ ನಾಯಕರು ಮಾತುಕತೆ ನಡೆಸಲಿದ್ದು, ನಂತರ ಉಭಯ ಪಕ್ಷಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಸೋಲೀಹ್‌ ಸೋಮವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ನ್ಯಾಯಾಂಗ ಸಹಕಾರಕ್ಕಾಗಿ ಒಪ್ಪಂದವನ್ನು ಅನುಮೋದಿಸಿದ ಕೆಲವು ದಿನಗಳ ನಂತರ ಈ ಪ್ರವಾಸ ನಡೆದಿದೆ. ಈ ಒಪ್ಪಂದವು ನ್ಯಾಯಾಲಯದ ಡಿಜಿಟಲೀಕರಣಕ್ಕಾಗಿ ಮಾಹಿತಿ ತಂತ್ರಜ್ಞಾನದ (ಐಟಿ) ಪ್ರಯೋಜನಗಳನ್ನು ಪಡೆಯಲು ವೇದಿಕೆಯನ್ನು ಒದಗಿಸುತ್ತದೆ ಮತ್ತು ಎರಡೂ ದೇಶಗಳಲ್ಲಿನ ಐಟಿ ಕಂಪನಿಗಳು ಮತ್ತು ಸ್ಟಾರ್ಟ್-ಅಪ್‌ಗಳಿಗೆ ಸಂಭಾವ್ಯ ಬೆಳವಣಿಗೆಯ ಪ್ರದೇಶದ ಕುರಿತು ಚರ್ಚೆಯಾಗಲಿದೆ.

ಸೋಲಿಹ್ ಅವರು ಸೋಮವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯ ನಂತರ, ಜೈಶಂಕರ್ ಅವರು ಭಾರತದ ‘ನೆರೆಹೊರೆ ಮೊದಲು’ ನೀತಿ ಮತ್ತು ಮಾಲ್ಡೀವ್ಸ್‌ನ ‘ಭಾರತ ಮೊದಲು’ ನೀತಿಯು ಪರಸ್ಪರ ಪೂರಕವಾಗಿದ್ದು ಇದನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಉಲ್ಲೇಖಿಸಿದ್ದಾರೆ.

ಸೋಲಿಹ್ ಅವರು ಅಧ್ಯಕ್ಷರಾದ ನಂತರ ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ 2018 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭಾರತ ಪ್ರವಾಸವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!