Wednesday, October 5, 2022

Latest Posts

ರಾಷ್ಟ್ರ ರಾಜಧಾನಿಗೆ ಕೋವಿಡ್ ಕಾಟ: ಕಡ್ಡಾಯವಾಗಿ ಮಾಸ್ಕ್ ಎಂದ ಆರೋಗ್ಯಾಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಉಲ್ಬಣಿಸುತ್ತಿದೆ. ಈ ನಡುವೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜತೆಗೆ ನಿಯಮಗಳನ್ನು ಪಾಲಿಸುವಂತೆ ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

ಕೊರೋನಾ ಸೋಂಕಿನಲ್ಲಿ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರವು ಸಹ ಏರುಗತಿಯತ್ತ ಸಾಗುತ್ತಿದೆ. ಹೀಗಾಗಿ ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲದ ಹಿನ್ನೆಲೆ ಕೊರೋನಾ ತಡೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ದಿಲ್ಲಿ ಲೆಫ್ಟಿನಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ.

ಸೋಂಕಿನಿಂದ ಚೇತರಿಸಿ ಕೊಳ್ಳುತ್ತಿರುವವರ ಪ್ರಮಾಣವು ಉತ್ತಮ ವಾಗಿರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಆದರೆ, ಪ್ರಕರಣಗಳ ಏರಿಕೆ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರಸ್ತುತ ಕೊರೋನಾಗಾಗಿ ಮೀಸಲಿರಿಸಲಾಗಿರುವ 9,000 ಹಾಸಿಗೆಗಳಲ್ಲಿ 500 ಭರ್ತಿಯಾಗಿವೆ. ಇದರಲ್ಲಿ 2,129 ಐಸಿಯು ಹಾಸಿಗೆಗಳಿದ್ದು, ಈ ಪೈಕಿ 20 ಭರ್ತಿಯಾಗಿವೆ. ಹಾಗೆಯೇ 65 ರೋಗಿಗಳು ವೆಂಟಿಲೇಷನ್‌ನಲ್ಲಿದ್ದಾರೆ ಎಂದು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸುಶೀಲಾ ಗರ್ಗ್ ತಿಳಿಸಿದ್ದಾರೆ.

ಕೊರೋನಾ ಪ್ರಕರಣಗಳ ಏರಿಕೆಯಿಂದ ಗಾಬರಿಗೊಳಗಾಗುವ ಅಗತ್ಯವಿಲ್ಲ. ಆದರೆ, ಇದು ಎಚ್ಚರಿಕೆಯ ಗಂಟೆ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ ಎಂದೂ ಡಾ. ಗರ್ಗ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!