ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ, ಅಮೆರಿಕಾವೇ ಜಗತ್ತಿನಲ್ಲಿ ಹೀರೋ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಇತರೆ ಯಾವುದೇ ದೇಶಕ್ಕಿಂತಲೂ ಭಾರತ ಮತ್ತು ಅಮೆರಿಕ ನೀಡಿರುವ ಕೊಡುಗೆ ಅಪಾರ ಎಂದು ಖುದ್ದು ಅಮೆರಿಕ ಹೇಳಿದೆ!

ಈ ಎರಡೂ ದೇಶಗಳು ತಮ್ಮ ಜನರಿಗೆ ಲಸಿಕೆ ನೀಡುವುದರ ಜತೆಗೆ ಇತರೆ ರಾಷ್ಟ್ರಗಳಿಗೂ ಲಸಿಕೆಗಳನ್ನು ದಾನವಾಗಿ ನೀಡಿವೆ. ಅಮೆರಿಕ ಮತ್ತು ಭಾರತದ ಈ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಎಂದು ಶ್ವೇತ ಭವನದ ಕೊರೋನಾ ಸೋಂಕು ಪ್ರತಿಕ್ರಿಯೆ ಸಂಯೋಜಕ ಡಾ. ಆಶೀಶ್ ಜ್ಹಾ ತಿಳಿಸಿದ್ದಾರೆ.

ಅಮೆರಿಕಾಗೆ ರಾಯಭಾರಿಯಾಗಿರುವ ತರಣ್‌ಜಿತ್ ಸಿಂಗ್ ಸಂಧು, ಇಂಡಿಯಾ ಹೌಸ್‌ನಲ್ಲಿ ಆಯೋಜಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಕೊರೋನಾದಿಂದ ಜಗತ್ತನ್ನು ರಕ್ಷಿಸಲು ಭಾರತ ಮತ್ತು ಅಮೆರಿಕ ಸಾಕಷ್ಟು ಲಸಿಕೆಗಳನ್ನು ನೀಡುವ ಮೂಲಕ ಸೋಂಕಿನ ವಿರುದ್ಧದ ಹೋರಾಟವನ್ನು ಬೆಂಬಲಿಸಿದೆ ಎಂದು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!