BTS BAND ಹುಚ್ಚು, ಕೊರಿಯನ್ ಸ್ಟಾರ‍್ಸ್ ನೋಡಲು ಮನೆ ಬಿಟ್ಟ ಹುಡುಗಿಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದಲ್ಲಿ ಸುಪ್ರಸಿದ್ಧ ಕೊರಿಯನ್ (Korean)  ಪಾಪ್‌ಬ್ಯಾಂಡ್ ಬಿಟಿಎಸ್( BTS) ಕಲಾವಿದರನ್ನು ಭೇಟಿ ಮಾಡಲು ಮೂವರು ಹುಡುಗಿಯರು ಮನೆ ಬಿಟ್ಟು ಬಂದಿದ್ದಾರೆ.

ಬಿಟಿಎಸ್‌ನ ಡೈ ಹಾರ್ಡ್ ಫ್ಯಾನ್ಸ್ ಆದ ಈ ಗರ್ಲ್ಸ್‌ಗೆ ಕೇವಲ 14 ವರ್ಷ! ಹೌದು, ಎಂಟನೇ ತರಗತಿ ಓದುತ್ತಿದ್ದ ಹುಡುಗಿಯರು, ತುಂಬಾ ದಿನಗಳಿಂದ ಪ್ಲ್ಯಾನ್ ಮಾಡಿಕೊಂಡು ಮನೆ ಬಿಟ್ಟು ಓಡಿದ್ದಾರೆ.

ಮನೆಯವರಿಗೆ ತಿಳಿಯದಂತೆ 14 ಸಾವಿರ ರೂಪಾಯಿ ಹಣವನ್ನು ಕೂಡಿಸಿ ಕೊರಿಯಾಗೆ ಹೋಗಲು ನಿರ್ಧರಿಸಿದ್ದಾರೆ. ವಿಶಾಖಪಟ್ಟಣಂ ಅಥವಾ ಚೆನ್ನೈನ ಬಂದರಿನಿಂದ ಕೊರಿಯಾಗೆ ಹೋಗಬಹುದು ಎನ್ನುವ ಲೆಕ್ಕಾಚಾರ ಇವರದ್ದಾಗಿತ್ತು.

ಇತ್ತ ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಭೂಮಿ ಮೇಲೆ ಇರುವ ಎಲ್ಲ ಕೆಟ್ಟ ಕೆಲಸಗಳೂ ನಮ್ಮ ಮಕ್ಕಳ ಮೇಲೆ ನಡೆದಿವೆ ಎಂದು ಊಹಿಸುತ್ತಾ ಜೀವ ಬಿಡುವಷ್ಟು ಕಣ್ಣೀರಿಟ್ಟಿದ್ದಾರೆ. ಪೊಲೀಸರಿಗೂ ಕಿಡ್ನಾಪ್ ಇರಬಹುದು ಎನಿಸುವಷ್ಟು ಅನುಮಾನ ಮೂಡಿದೆ.

ಈರೋಡ್‌ನಿಂದ ಹುಡುಗಿಯರು ರೈಲಿನ ಮೂಲಕ ಚೆನ್ನೈ ತಲುಪಿದ್ದಾರೆ. ರಾತ್ರಿಯಾದ ಕಾರಣ ಹೊಟೇಲ್ ರೂಂ ಪಡೆದು ಮಲಗಿದ್ದಾರೆ. ಅದಕ್ಕೆ ಮೂರು ಸಾವಿರ ಖರ್ಚಾಗಿದ್ದು, ಉಳಿದ ಹಣದಲ್ಲಿ ಕೊರಿಯಾ ಹೋಗಲು ಸಾಧ್ಯವಿಲ್ಲ ಎನಿಸಿದೆ.

ಈರೋಡಿನಲ್ಲಿ ಮತ್ತೆ ರೈಲು ಹತ್ತಿ ಮನೆಗೆ ವಾಪಾಸಾಗಲು ನಿರ್ಧರಿಸಿದ್ದಾರೆ. ಆದರೆ ವೆಲ್ಲೂರು ನಿಲ್ದಾಣದಲ್ಲಿ ಊಟ ಮಾಡಲು ಇಳಿದಾಗ ರೈಲು ಹೊರಟಿದೆ. ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ಅವರನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಓಡಿಹೋಗಿದ್ದರೂ ಪರವಾಗಿಲ್ಲ, ಮಕ್ಕಳು ವಾಪಾಸಾದರಲ್ಲ ಎಂದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!