ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಕ್ರಿಕೆಟರ್ ವಿರಾಟ್ ಕೊಹ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಬೆಂಗಾಲ್ ಕ್ರಿಕೆಟ್ ಮಂಡಳಿ ಕೊಹ್ಲಿಗೆ ಚಿನ್ನದ ಬ್ಯಾಟ್ನ್ನು ಗಿಫ್ಟ್ ಆಗಿ ನೀಡಿದೆ.
ಸಿಎಬಿ ಮಂಡಳಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಕೊಹ್ಲಿಗೆ ಗಿಫ್ಟ್ ಹಸ್ತಾಂತರಿಸಿದ್ದು, ಬ್ಯಾಟ್ ಮೇಲೆ ಹ್ಯಾಪಿ ಬರ್ಥ್ಡೇ ವಿರಾಟ್ ಎಂದು ಬರೆಸಲಾಗಿದೆ.
ಭಾನುವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ್ದು, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.