ತಂಡಕ್ಕೆ ಆಡಲು ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದ ಭಾರತೀಯ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತ್ರಿಪುರಾ ಅಂಡರ್-19 ತಂಡವನ್ನು ಸೇರಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಯುವ ಕ್ರಿಕೆಟಿಗನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಕ್‌ಪೋರ್ ಪಟ್ಟಣದ ನಿವಾಸಿಯಾಗಿರುವ ಕ್ರಿಕೆಟಿಗ, ತಂಡವನ್ನು ತೊರೆದು ತ್ರಿಪುರಾ ಪರ ಆಡಲು ಬಯಸಿದ್ದ. ಇದಕ್ಕಾಗಿ ಹಲವಾರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ತ್ರಿಪುರಾದ ಖಾಯಂ ನಿವಾಸಿ ಪ್ರಮಾಣಪತ್ರ, ಮತ್ತು ಪಡಿತರ ಚೀಟಿಯನ್ನು ನಕಲಿಯಾಗಿ ಸೃಷ್ಟಿಸಿದ್ದ. ಇದನ್ನು ನಂಬಿದ್ದ ಅಧಿಕಾರಿಗಳು ಸೆಪಾಹಿಜಾಲಾ ಜಿಲ್ಲೆಯ ಬಿಶಾಲ್‌ಗಢ ಕ್ರಿಕೆಟ್ ಅಸೋಸಿಯೇಷನ್‌ನಿಂದ U-19 ಟ್ರಯಲ್ಸ್‌ಗಾಗಿ ಆತನ ಹೆಸರನ್ನು ತ್ರಿಪುರಾ ಕ್ರಿಕೆಟ್ ಸಂಸ್ಥೆಗೆ (TCA) ಶಿಫಾರಸು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 11 ರಂದು ತ್ರಿಪುರಾ ಕ್ರಿಕೆಟ್ ಸಂಸ್ಥೆ ಘೋಷಿಸಿದ 19 ವರ್ಷದೊಳಗಿನವರ ತಂಡದಲ್ಲಿ ಆತನ ಹೆಸರು ಕಾಣಿಸಿಕೊಂಡಿದೆ.
ಆತನ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ನಕಲಿ ದಾಖಲೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಶನಿವಾರ ರಾತ್ರಿ ಟಿಸಿಎ ಉಸ್ತುವಾರಿ ಕಾರ್ಯದರ್ಶಿ ಕಿಶೋರ್ ದಾಸ್ ಆ ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕ್ರಿಕೆಟಿಗ ಈ ಹಿಂದೆ ಉತ್ತರ ಕೋಲ್ಕತ್ತಾದ ಪೈಕ್ಪಾರಾ ಸ್ಪೋರ್ಟಿಂಗ್ ಕ್ಲಬ್‌ಗಾಗಿ ಆಡಿರುವುದು ಕಂಡುಬಂದಿದೆ. “ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ನಕಲಿ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ ಜನರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯ ಅಧಿಕಾರಿ ಸುಬ್ರತಾ ಚಕ್ರವರ್ತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!