Sunday, March 26, 2023

Latest Posts

ಕೊನೆಗೂ ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಲೆಕ್ಷನ್ ಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊನೆಗೂ ದಿಲ್ಲಿ ಮಹಾನಗರ ಪಾಲಿಕೆಯ(MCD) ಮೇಯರ್ ಎಲೆಕ್ಷನ್ (Delhi Mayoral Poll) ಗೆ ಡೇಟ್ ಫಿಕ್ಸ್ ಆಗಿದೆ.

ಈ ಹಿಂದೆ ಮೂರು ಬಾರಿ ಮೇಯರ್ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬಹುಮತವನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ(ಆಪ್) ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ವಾದಿಸಿತ್ತು. ಆದರೆ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ನಾಮನಿರ್ದೇಶನಗೊಂಡ ಸದಸ್ಯರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮೂರು ಬಾರಿಯೂ ಗದ್ದಲದಲ್ಲೇ ಸಭೆ ಮುಕ್ತಾಯವಾಗಿತ್ತು.

ಬಳಿಕ ಸುಪ್ರೀಂ ಕೋರ್ಟ್‌ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನ ಹಕ್ಕು ಇಲ್ಲ ಎಂದು ತೀರ್ಪು ನೀಡಿದ ಬೆನ್ನಲ್ಲೇ, ಇದೀಗ ಫೆಬ್ರವರಿ 22, ಬುಧವಾರ ದಿಲ್ಲಿ ಮಹಾನಗರ ಪಾಲಿಕೆಯ(MCD) ಮೇಯರ್ ಎಲೆಕ್ಷನ್ (Delhi Mayoral Poll) ನಡೆಯಲಿದೆ.

ಬುಧವಾರ ನಡೆಯುವ ಸಭೆಯಲ್ಲಿ ಮೇಯರ್ ಚುನಾವಣೆ ಜತೆಗೆ, ಉಪಮೇಯರ್ ಹಾಗೂ ಆರು ಸದಸ್ಯರ ಸ್ಥಾಯಿ ಸಮಿತಿಗಳಿಗೂ ಎಲೆಕ್ಷನ್ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!