ಗಟ್ಟಿಯಾಗಲಿದೆ ಅಪರಾಧ ಮಾಹಿತಿ ಜಾಲ, ಪೊಲೀಸ್, ಸಿಬಿಐ, ಎನ್ ಐ ಎಗಳೆ ಡೇಟಾಗಳೆಲ್ಲ ಒಂದೆಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ಕ್ರೈಮ್ ಆಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ’- ಇದು ಈವರೆಗೆ ದೇಶದ ಎಲ್ಲ ಪೊಲೀಸ್ ಠಾಣೆಗಳನ್ನು ಜೋಡಿಸಿದೆ. ಇದೀಗ ಮುಂದಿನ ಹಂತದಲ್ಲಿ ಕೇಂದ್ರದ ತನಿಖಾ ಏಜೆನ್ಸಿಗಳಾದ ಸಿಬಿಐ, ರಾಷ್ಟ್ರೀಯ ತನಿಖಾ ದಳ, ಮಾದಕಪದಾರ್ಥ ನಿಗ್ರಹ ದಳ ಇವೆಲ್ಲದರ ಜತೆ ಉಪಲಬ್ಧವಿರುವ ಮಾಹಿತಿಗಳನ್ನೂ ಸೇರಿಸಿಕೊಳ್ಳಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರದ ಕಾರ್ಯಕ್ರಮವೊಂದರಲ್ಲಿ ನೀಡಿರುವ ಮಾಹಿತಿ ಇದು.

ಇಂಥದೊಂದು ಬೃಹತ್ ಮಾಹಿತಿ ಜಾಲವು ಅಪರಾಧಗಳನ್ನು ತಡೆಯುವುದಕ್ಕೆ ಕಾರಣವಾಗಬೇಕು ಎಂಬುದು ಅವರ ಆಗ್ರಹ. ಅದಕ್ಕೆ ಉದಾಹರಣೆಯನ್ನೂ ನೀಡಿದ ಸಚಿವರು, “ಕೃಷಿಯ ನಿರ್ದಿಷ್ಟ ಋತುವಿನಲ್ಲಿ ರೈತರ ನಡುವಿನ ಜಗಳ, ವ್ಯಾಜ್ಯಗಳ ಎಫ್ ಐ ಆರ್ ಗಳು ದಾಖಲಾಗುತ್ತವೆ. ನಂತರ ಅವು ಹಾಗೆಯೇ ಕೂರುತ್ತವೆ. ಇಂಥದೊಂದು ಪ್ಯಾಟರ್ನ್ ಗೊತ್ತಾದಾಗ ಅಂಥ ಸಮಸ್ಯೆಗಳನ್ನು ತಡೆಯುವುದು ಹೇಗೆ ಎಂಬುದು ತಿಳಿಯುತ್ತದೆ” ಎಂದು ವಿವರಿಸಿದ್ದಾರೆ.

ಅಂದಹಾಗೆ, ಈ ಮಾಹಿತಿ ಜಾಲ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸುವುದಾದರೆ- ಆಯಾ ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿ ಅಪರಾಧಿಗಳ ಬೆರಳಚ್ಚು ಸಂಗ್ರಹಿಸಿ ಈ ವ್ಯವಸ್ಥೆಗೆ ಫೀಡ್ ಮಾಡಿರುತ್ತವೆ. ಮತ್ತೆಲ್ಲೊ ಅಪರಾಧ ನಡೆದ ಸ್ಥಳದಲ್ಲಿ ಬೆರಳಚ್ಚುಗಳು ಸಿಕ್ಕಾಗ ಅವನ್ನು ಅದಾಗಲೇ ಇರುವ ಡೆಟಾಬೇಸ್ ನಲ್ಲಿ ಪರಿಶೀಲಿಸಿ ಅದಾಗಲೇ ದಾಖಲೆಯಲ್ಲಿರುವ ಯಾರಿಗಾದರೂ ಹೋಲುತ್ತದೆಯೇ ಎಂದು ಪರಿಶೀಲಿಸುವುದಕ್ಕೆ ಅನುವಾಗುತ್ತದೆ. ಇದೇ ರೀತಿ ಹಲವು ಆಯಾಮಗಳಲ್ಲಿ ‘ಕ್ರೈಮ್ ಆಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ’ ಅಪರಾಧ ಪತ್ತೆ ಕಾರ್ಯದಲ್ಲಿ ಸಹಾಯಕ್ಕೆ ಬರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!