ದಿನಭವಿಷ್ಯ: ಈ ರಾಶಿಯವರಿಗೆ ಪ್ರತಿಕೂಲ ಪರಿಸ್ಥಿತಿ ಉದ್ಭವವಾದೀತು, ಧೃತಿಗೆಡದಿರಿ

ಮೇಷ
ನಿಮ್ಮ ಗುರಿಯಿಂದ ವಿಚಲಿತರಾಗದಿರಿ. ಅಡ್ಡಿಗಳು ಒದಗಿದರೂ ಅವು ನಿವಾರಣೆ ಆಗುವವು. ಹಳೆಯ ತಪ್ಪನ್ನೆ ಪುನರಾವರ್ತಿಸದಿರಿ. ಖರ್ಚು ಅಕ.

ವೃಷಭ
ನಿಮ್ಮ ನಿರ್ವಹಣೆ ಇನ್ನಷ್ಟು ಉತ್ತಮಪಡಿಸಬೇಕು. ಇಲ್ಲವಾದರೆ ಬಯಸಿದ ಫಲ ಸಿಗಲಾರದು. ಆಹಾರದಲ್ಲಿ ಹಿತಮಿತ ಸಾಸುವುದು ಒಳಿತು. ಹೊಟ್ಟೆ ಕೆಡುವ ಸಂಭವ.

ಮಿಥುನ
ನಿಮ್ಮ ಸುತ್ತಲಿನ ಬದಲಾವಣೆಗಳು ನಿಮಗೆ ಪೂರಕವಾಗುವವು. ಹಾಗಾಗಿ ಅವುಗಳಿಗೆ ಅಲರ್ಜಿ ತೋರದಿರಿ. ಹೊಂದಾಣಿಕೆ ಮಾಡಿಕೊಳ್ಳಿರಿ.

ಕಟಕ
ನಿಮ್ಮ ಜತೆಗಿನ ವ್ಯಕ್ತಿಗಳ ವರ್ತನೆ ಅಸಹನೀಯ ಎನಿಸಬಹುದು. ಆದರೆ ಅವರ ಜತೆ ಹೊಂದಿ ಬಾಳುವುದು ಮುಖ್ಯ. ಇತರರ ಭಾವನೆಯನ್ನು ಗೌರವಿಸಿ.

ಸಿಂಹ
ಮನದೊಳಗಿನ ತಾಕಲಾಟ ಕಡಿಮೆ ಮಾಡಲು ನಿಮ್ಮ ಇಷ್ಟದ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಕೌಟುಂಬಿಕ ಪರಿಸ್ಥಿತಿ ಮನಸ್ಸಿನ ಶಾಂತಿ ಕದಡಬಹುದು.

ಕನ್ಯಾ
ಆರ್ಥಿಕ ಒತ್ತಡ ಕಾಡಬಹುದು. ಹಾಗೆಂದು ಗಾಬರಿಯಾಗಬೇಕಾದ ಅಗತ್ಯವಿಲ್ಲ. ಸೂಕ್ತ ನೆರವು ಸಕಾಲದಲ್ಲಿ ಒದಗುವುದು.

ತುಲಾ
ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ. ಇಲ್ಲವಾದರೆ ದೈಹಿಕ ಕಿರಿಕಿರಿ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಉದ್ವಿಗ್ನತೆ ಹೆಚ್ಚೀತು.

ವೃಶ್ಚಿಕ
ನೀವು ತೋರುವ ಪ್ರೀತಿ, ಕಾಳಜಿಗೆ ಅದೇ ಬಗೆಯ ಸ್ಪಂದನೆ ದೊರಕದೆ ಇರಬಹುದು. ಅದರಿಂದ ಎದೆಗುಂದದಿರಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ.

ಧನು
ಪ್ರತಿಕೂಲ ಪರಿಸ್ಥಿತಿ ಉದ್ಭವವಾದೀತು. ಅದರಿಂದ ಧೃತಿಗೆಡದಿರಿ. ನಿಮ್ಮ ಛಲ ಬಿಡದಿದ್ದರೆ ನೀವು ಯಶ ಸಾಸುವಿರಿ. ಇತರರನ್ನು ಅವಲಂಭಿಸದಿರಿ.

ಮಕರ
ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಬಂಧುಗಳಿಂದ ಹಿತ ತರುವ ಸುದ್ದಿ. ಆರ್ಥಿಕ ಲಾಭವೂ ಉಂಟಾದೀತು. ತೃಪ್ತಿಕರ ದಿನವಿದು.

ಕುಂಭ
ಇಂದು ಎಂದಿಗಿಂತ ಹೆಚ್ಚು ಕಾರ್ಯ ಮಾಡಬೇಕಾಗುವುದು. ಹೊಣೆಗಾರಿಕೆಯೂ ಹೆಚ್ಚು. ಇತರರ ಸಹಕಾರ ನಂಬಿಕೊಂಡು ಕೂರದಿರಿ. ನೀವೇ ನಿರ್ವಹಿಸಿ.

ಮೀನ
ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಕೆಲವು ಭಾವುಕ ವಿಷಯಗಳನ್ನು ವೈಚಾರಿಕತೆಯಿಂದ ಚಿಂತಿಸಿ.ಹಾಗಾಗಿ  ಚಿಂತೆ ಕಡಿಮೆಯಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!