ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದ ಬಳಿಯ ಬಂಗಾರದೊಡ್ಡಿ ನಾಲೆಯಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು ಸುತ್ತಮುತ್ತಲ ರೈತರನ್ನು ಆತಂಕಗೊಳಿಸಿದೆ.
ಬಂಗಾರದೊಡ್ಡಿ ಪಕ್ಕದಲ್ಲೆ ಇರುವ ಪಕ್ಷಿಧಾಮದಿಂದ ಈ ಮೊಸಳೆ ಬಂದಿರುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ. ಇತ್ತೀಚೆಗಷ್ಟೇ ವಿರಿಜಾ ನಾಲೆ ಬಳಿ ಅರಣ್ಯ ಅಧಿಕಾರಿಗಳು ಬೃಹತ್ ಗಾತ್ರದ ಮೊಸಳೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಿದ್ದರು. ಆದರೆ ಮತ್ತೆ ಬಂಗಾರದೊಡ್ಡಿ ನಾಲೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿಂದ ಈ ಭಾಗದ ರೈತರನ್ನು ಆತಂಕಗೊಂಡು , ಮೊಸಳೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಅರಣ್ಯ ಇಲಾಖೆ ಆರ್‌ಎಫ್‌ಒ ಸುನೀತಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೊಸಳೆ ಸೆರೆ ಹಿಡಿಯಲು ಮುಂಜಾಗ್ರತ ಕ್ರಮ ವಹಿಸಿದ್ದಾರೆ.